Thursday, June 25, 2026
Homeತಾಜಾ ಸುದ್ದಿ189 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್

189 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್

- Advertisement -
- Advertisement -

ನವದೆಹಲಿ; ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ 189 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಆಗಿದೆ. ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ನಾಯಕರ ಮಹತ್ವದ ಸುದ್ದಿಗೋಷ್ಠಿಯಲ್ಲಿ 189 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದಾರೆ.

ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೊದಲ 189 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಇನ್ನು ಈ ಬಾರಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.16 ಎಸ್ ಟಿ ಅಭ್ಯರ್ಥಿಗಳಿಗೆ, 32 ಒಬಿಸಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.

ಶಿಗ್ಗಾಂವಿಯಿಂದ ಬೊಮ್ಮಾಯಿ ಸ್ಪರ್ಧಿಸಲಿದ್ದಾರೆ. ಅಥಣಿಯಿಂದ ಮಹೇಶ್ ಕುಮಟಹಳ್ಳಿ, ನಿಪ್ಪಾಣಿಯಿಂದ ಶಶಿಕಲಾ ಜೊಲ್ಲೆ, ಅರಭಾವಿಯಿಂದ ಬಾಲಚಂದ್ರ ಜಾರಕಿಹೊಳಿ ಸ್ಪರ್ಧಿಸಲಿದ್ದಾರೆ. ಕುಡಚಿ ಪಿ ರಾಜೀವ್, ಬೆಳಗಾವಿ ಉತ್ತರ ರವಿ ಪಾಟೀಲ್, ಬೆಳಗಾವಿ ದಕ್ಷಿಣ ಅಭಯ್, ಬೀಳಗಿ ಮುರುಗೇಶ್ ನಿರಾಣಿ, ಮುಧೋಳ ಗೋವಿಂದ ಕಾರಜೋಳ ಸ್ಪರ್ಧಿಸಲಿದ್ದಾರೆ.

ಇನ್ನು ಗೋಕಾಕ್ ನಿಂದ ರಮೇಶ್ ಜಾರಕಿಹೊಳಿ, ಅಫ್ಜಲ್ ಪುಲ್ ಮಾಲೀಕಯ್ಯ ಗುತ್ತೆದಾರ್, ವಿಜಯಪುರ ಬಸನಗೌಡ ಪಾಟೀಲ್ ಯತ್ನಾಳ್, ಸುರಪುರ ರಾಜುಗೌಡ, ಕಲಬುರಗಿ ಗ್ರಾಮಾಂತರ ಬಸವರಾಜ್, ತೇರದಾಳ ಸಿದ್ದು ಸವದಿ, ಮುದ್ದೇಬಿಹಾಳ್ ಎಸ್ ಎಸ್ ಪಾಟೀಲ್ ನಡಹಳ್ಳಿ, ಕಲಬುರಗಿ ದತ್ತಾತ್ರೇಯ ಪಾಟೀಲ್,ಯಲಬುರ್ಗಾ ಹಾಲಪ್ಪ ಆಚಾರ್, ಸವದತ್ತಿ ರತ್ನ ಮಹಾಮನಿ,ಶಿರಸಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಹಿರೇಕೆರೂರಿನಲ್ಲಿ ಬಿ ಸಿ ಪಾಟೀಲ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹುಕ್ಕೇರಿ ನಿಖಿಲ್ ಕತ್ತಿ, ಶಿರಹಟ್ಟಿ ಚಂದ್ರು ಲಮಾಣಿ, ಬಳ್ಳಾರಿ ಗ್ರಾಮೀಣ ಶ್ರೀರಾಮುಲು, ಬಳ್ಳಾರಿ ನಗರ ಸೋಮಶೇಖರ್ ರೆಡ್ಡಿ, ಶಿಕಾರಿಪುರ ಬಿ ವೈ ವಿಜಯೇಂದ್ರ, ಕುಂದಾಪುರ ಕಿರಣ್, ಹೊನ್ನಾಳಿ ರೇಣುಕಾಚಾರ್ಯ, ಕಾರ್ಕಳ ಸುನೀಲ್ ಕುಮಾರ್, ಉಡುಪಿ ಯಶ್ ಪಾಲ್ ಸುವರ್ಣ, ಕಾಪು ಕ್ಷೇತ್ರದಿಂದ ಗುರ್ಮೆ ಸುರೇಶ್ ಶೆಟ್ಟಿ ಟಿಕೆಟ್ ಪಡೆದಿದ್ದಾರೆ.

- Advertisement -

Latest News

error: Content is protected !!