Sunday, June 7, 2026
Homeಕರಾವಳಿಮಂಗಳೂರು: ರೈಲು ಹಳಿಗೆ ಮರ ಬಿದ್ದದ್ದನ್ನು ಗಮನಿಸಿ ರೈಲು ತಡೆದ ಗಟ್ಟಿಗಿತ್ತಿ; ಮಹಿಳೆಯನ್ನು ಸನ್ಮಾನಿಸಿದ ಪೊಲೀಸ್ ಅಧಿಕಾರಿಗಳು

ಮಂಗಳೂರು: ರೈಲು ಹಳಿಗೆ ಮರ ಬಿದ್ದದ್ದನ್ನು ಗಮನಿಸಿ ರೈಲು ತಡೆದ ಗಟ್ಟಿಗಿತ್ತಿ; ಮಹಿಳೆಯನ್ನು ಸನ್ಮಾನಿಸಿದ ಪೊಲೀಸ್ ಅಧಿಕಾರಿಗಳು

- Advertisement -
- Advertisement -

ಮಂಗಳೂರು: ರೈಲು ಹಳಿಗೆ ಮರ ಬಿದ್ದದ್ದನ್ನು ಗಮನಿಸಿ ತಕ್ಷಣ ಎಚ್ಚೆತ್ತುಕೊಂಡು ಕೆಂಪು ಬಟ್ಟೆ ಪ್ರದರ್ಶಿಸಿ ಸಂಭಾವ್ಯ ರೈಲು ಅನಾಹುತವನ್ನು ತಪ್ಪಿಸಿದ ಕುಡುಪು ಸಮೀಪದ ಆಯರಮನೆಯ ಚಂದ್ರಾವತಿ ಅವರನ್ನು ಮಂಗಳೂರು ರೈಲ್ವೆ ಪೊಲೀಸ್ ಅಧಿಕಾರಿಗಳು ಸೆಂಟ್ರಲ್ ನಿಲ್ದಾಣದ ರೈಲ್ವೆ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಿ ಗೌರವಿಸಿದ್ರು.

ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಠಾಣೆಗೆ ಕರೆಯಿಸಿ ಸನ್ಮಾನಿಸಿದ್ದಾರೆ.ಈ ಸಂದರ್ಭ ಮಾತನಾಡಿದ ಮಂಗಳೂರು ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಕೊಟ್ಟಾರಿ 70ರ ವಯಸ್ಸಿನ ಚಂದ್ರಾವತಿ ಜೀವದ ಹಂಗು ತೊರೆದು ಸಂಭಾವ್ಯ ರೈಲು ದುರ್ಘಟನೆಯನ್ನು ತಪ್ಪಿಸುವ ಮೂಲಕ ಮಾದರಿ ಕಾರ್ಯ ನಡೆಸಿದ್ದಾರೆ. ಚಂದ್ರಾವತಿ ಅವರ ಸಾಧನೆಯನ್ನು ಇಲಾಖೆಯ ಕೇಂದ್ರ ಕಚೇರಿಗೂ ಮಾಹಿತಿ ನೀಡಲಾಗಿದೆ ಎಂದರು.

ರೈಲ್ವೆ ಇಲಾಖೆಯ ಆರ್‌ಪಿಎಫ್ ಎಸ್.ದಿಲೀಪ್ ಕುಮಾರ್, ಚಂದ್ರಾವತಿಯ ಪುತ್ರ ನವೀನ್ ಕುಮಾರ್ ಕುಡುಪು, ಸಂಬಂಧಿಕರಾದ ಉದಯ್ ಕುಡುಪು ಮುಂತಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!