Friday, June 5, 2026
Homeಕರಾವಳಿಸುಳ್ಯ; ಮನೆಯಲ್ಲಿ ಮಲಗಿದಲ್ಲೇ ವ್ಯಕ್ತಿ ಸಾವು

ಸುಳ್ಯ; ಮನೆಯಲ್ಲಿ ಮಲಗಿದಲ್ಲೇ ವ್ಯಕ್ತಿ ಸಾವು

- Advertisement -
- Advertisement -

ಸುಳ್ಯ: ಮನೆಯಲ್ಲಿ ಮಲಗಿದಲ್ಲೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಪದ್ಮನಾಭ (50) ಮೃತ ದುರ್ದೈವಿ.

ಪದ್ಮನಾಭ ಅವರು ಅಣ್ಣ ಶೇಖರ ಪೂಜಾರಿ ಅವರ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಎ.3ರಿಂದ ತರಕಾರಿ ಅಂಗಡಿಯನ್ನು ಬಾಗಿಲು ಹಾಕಿಕೊಂಡು ತಮ್ಮ ಬಾಡಿಗೆ ಮನೆಗೆ ಹೋಗಿದ್ದು, ಎ.4ರಂದು ಬೆಳಗ್ಗೆ ಅಂಗಡಿಯ ಬಾಗಿಲು ತೆರೆಯಲು ಬಾರದೇ ಇದ್ದುದರಿಂದ ಶೇಖರ ಅವರು ಪದ್ಮನಾಭ ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ.ಕರೆ ಸ್ವೀಕರಿಸದ ಕಾರಣ ಮನೆಯ ಹತ್ತಿರ ಹೋಗಿ ನೋಡಿದಾಗ ಬಾಗಿಲು ಹಾಕಿತ್ತು.

ಕಿಟಕಿಯಿಂದ ನೋಡಿದಾಗ ಪದ್ಮನಾಭ ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲಿದ್ದರು. ಬಾಗಿಲನ್ನು ಮುರಿದು ಒಳಗೆ ಹೋಗಿ ನೋಡಿದಾಗ ಅವರು ಮೃತಪಟ್ಟಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

- Advertisement -

Latest News

error: Content is protected !!