Thursday, June 4, 2026
Homeಕರಾವಳಿಕಾಸರಗೋಡುಕೇರಳ ಲಾಟರಿಯಲ್ಲಿ 80 ಲಕ್ಷ ರೂ. ಗೆದ್ದ ಯುವಕ ನಿಗೂಢ ಸಾವು

ಕೇರಳ ಲಾಟರಿಯಲ್ಲಿ 80 ಲಕ್ಷ ರೂ. ಗೆದ್ದ ಯುವಕ ನಿಗೂಢ ಸಾವು

- Advertisement -
- Advertisement -

ಕೇರಳ ಲಾಟರಿ ಡ್ರಾದಲ್ಲಿ 80 ಲಕ್ಷ ರೂ. ಗೆದ್ದಿದ್ದ ಯುವಕನೊಬ್ಬ  ಸ್ನೇಹಿತನ ಮನೆಯಲ್ಲಿ ಮದ್ಯದ ಪಾರ್ಟಿಯ ಮಧ್ಯೆ ಆಳವಾದ ಹೊಂಡಕ್ಕೆ ಬಿದ್ದು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ತಿರುವನಂತಪುರಂನ ಪಂಗೋಡು ಮೂಲದ ಸಜೀವ್ (35) ಮೃತ ದುರ್ದೈವಿ,

ಸಜೀವ್ ಕಳೆದ ತಿಂಗಳು ಲಾಟರಿ ಗೆದ್ದಿದ್ದರು. ಕೆಲ ದಿನಗಳ ಹಿಂದಷ್ಟೇ ಅವರ ಬ್ಯಾಂಕ್ ಖಾತೆಗೆ ಬಹುಮಾನದ ಹಣ ಜಮೆಯಾಗಿದೆ. ಇದರ ಬೆನ್ನಲ್ಲೇ ಏಪ್ರಿಲ್ 1ರಂದು ರಾತ್ರಿ 9 ಗಂಟೆ ಸುಮಾರಿಗೆ ಪಂಗೋಡಿನಲ್ಲಿರುವ ರಾಜೇಂದ್ರನ್ ಪಿಳ್ಳೈ ಅವರ ಬಾಡಿಗೆ ಮನೆಯಲ್ಲಿ ಸಜೀವ್ ಮತ್ತು ಆತನ ಸ್ನೇಹಿತರು ಮದ್ಯದ ಪಾರ್ಟಿಗಾಗಿ ಸೇರಿದ್ದರು.

ಈ ಪಾರ್ಟಿಯಲ್ಲಿ ಸಂತೋಷ್ ಎಂಬ ವ್ಯಕ್ತಿ ಸಜೀವ್ ಅವರನ್ನು ತಳ್ಳಿದ್ದರಿಂದ ಅವರು ರಬ್ಬರ್ ತೋಟದಲ್ಲಿ ಹೊಂಡಕ್ಕೆ ಬಿದ್ದಿದ್ದಾರೆ. ಸ್ವಲ್ಪ ಸಮಯದ ನಂತರ, ಸಜೀವ್ ಅಸ್ವಸ್ಥಗೊಂಡಿದ್ದಾರೆ. ಅವರ ಸ್ನೇಹಿತರು ಸಜೀವ್ ಸಹೋದರನಿಗೆ ವಿಷಯ ತಿಳಿಸಿದ್ದಾರೆ.

ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸಜೀವ್​ರನ್ನು ಪಂಗೋಡೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಮೃತಪಟ್ಟಿದ್ದಾರೆ.ಈ ಸಂಬಂಧ ಪಂಗೋಡೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!