Thursday, June 4, 2026
Homeಚಿಕ್ಕಮಗಳೂರುಕೊಟ್ಟಿಗೆಹಾರದಲ್ಲಿ ಪೊಲೀಸರ ತಪಾಸಣೆ ವೇಳೆ 2.5 ಲಕ್ಷ ಹಣ ಪತ್ತೆ; ಹಣವನ್ನು ಸೀಝ್ ಮಾಡಿದ ಪೊಲೀಸ್...

ಕೊಟ್ಟಿಗೆಹಾರದಲ್ಲಿ ಪೊಲೀಸರ ತಪಾಸಣೆ ವೇಳೆ 2.5 ಲಕ್ಷ ಹಣ ಪತ್ತೆ; ಹಣವನ್ನು ಸೀಝ್ ಮಾಡಿದ ಪೊಲೀಸ್ ಮತ್ತು ಚುನಾವಣಾ ಅಧಿಕಾರಿಗಳು

- Advertisement -
- Advertisement -

ಕೊಟ್ಟಿಗೆಹಾರದಲ್ಲಿ ಪೊಲೀಸರ ತಪಾಸಣೆ ವೇಳೆ 2.5 ಲಕ್ಷ ಹಣ ಪತ್ತೆಯಾಗಿದೆ.‌ಪಾವಗಡ ಮೂಲದ ವೈದ್ಯಾಧಿಕಾರಿಯೊಬ್ಬರು ತಮ್ಮ ಫಾರ್ಚುನರ್ ಕಾರಿನಲ್ಲಿ 2.50 ಲಕ್ಷ ಹಣವನ್ನು ಧರ್ಮಸ್ಥಳ-ಕಟೀಲ್ ದೇವಸ್ಥಾನದ ಹುಂಡಿಗೆ ಹಾಕಲು ತಂದಿದ್ದರು ಎನ್ನಲಾಗಿದೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಹಣಕ್ಕೆ ದಾಖಲೆ ಇಲ್ಲದ ಕಾರಣ ಹಣವನ್ನ ಪೊಲೀಸ್ ಮತ್ತು ಚುನಾವಣಾ ಅಧಿಕಾರಿಗಳು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ಸೀಜ್ ಮಾಡಿದ್ದಾರೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆ 50 ಸಾವಿರ ಹಣ ಸಾಗಾಟಕ್ಕೆ ಮಾತ್ರ ಅವಕಾಶವಿದೆ. ಆದರೆ 2.50 ಲಕ್ಷ ಹಣಕ್ಕೆ ದಾಖಲೆ ಇಲ್ಲದ ಕಾರಣ ಹಣ ಸೀಜ್ ಮಾಡಿದ್ದಾರೆ.

- Advertisement -

Latest News

error: Content is protected !!