Wednesday, June 3, 2026
Homeಕರಾವಳಿಕಾರ್ಕಳ; ಮಗನ ಸಾವಿನಿಂದ ನೊಂದು ತಾಯಿ ಆತ್ಮಹತ್ಯೆ

ಕಾರ್ಕಳ; ಮಗನ ಸಾವಿನಿಂದ ನೊಂದು ತಾಯಿ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ: ಮಗನ ಸಾವಿನಿಂದ ನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದ ಅಜೆಕಾರಿನಲ್ಲಿ ನಡೆದಿದೆ.

ಕೆರ್ವಾಶೆ ಗ್ರಾಮದ ಬಂಗ್ಲೆಗುಡ್ಡೆಯ ಸುಬ್ಬಣ್ಣ ನಾಯಕ್ ಎಂಬವರ ಪತ್ನಿ ರತ್ನಾವತಿ ನಾಯಕ್(85) ಮೃತ ದುರ್ದೈವಿ.

ಇವರ ಕಿರಿಯ ಮಗ ಹರಿಶ್ಚಂದ್ರ ನಾಯಕ್ ಎಂಬವರು ಮಾ.26ರಂದು ಸಂಜೆ ವೇಳೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಕಿರಿಯ ಮಗನ ಮೇಲೆ ಅತೀಯಾದ ಪ್ರೀತಿ ಹೊಂದಿದ್ದ ರತ್ನಾವತಿ, ಇದೇ ಚಿಂತೆಯಲ್ಲಿ ಮನನೊಂದು ಅದೇ ದಿನ ರಾತ್ರಿ ಮನೆ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!