Saturday, June 6, 2026
Homeಕರಾವಳಿಮೂಡಬಿದಿರೆ: ಶಂಕಿತ ಡೆಂಗ್ಯೂ ಜ್ವರಕ್ಕೆ ವಿದ್ಯಾರ್ಥಿನಿ ಸಾವು

ಮೂಡಬಿದಿರೆ: ಶಂಕಿತ ಡೆಂಗ್ಯೂ ಜ್ವರಕ್ಕೆ ವಿದ್ಯಾರ್ಥಿನಿ ಸಾವು

- Advertisement -
- Advertisement -

ಮೂಡಬಿದಿರೆ: ಶಂಕಿತ ಡೆಂಗ್ಯೂ ಜ್ವರಕ್ಕೆ ಪ್ರಥಮ ಪಿಯುಸಿ ವಿಧ್ಯಾರ್ಥಿನಿ ಸಾವನಪ್ಪಿರುವ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ.  ಜ್ಯೋತಿನಗರ ನಿವಾಸಿ ಮಿಸ್ರಿಯಾ (17) ಮೃತ ವಿದ್ಯಾರ್ಥಿನಿ.

ಮಿಸ್ರಿಯಾ ಆಳ್ವಾಸ್‌ ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದರು.
ಮಿಸ್ರಿಯಾ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಬಿಳಿ ರಕ್ತ ಕಣಗಳ ಕುಸಿತದಿಂದ ಸಾವು ಸಂಭವಿಸಿದ್ದು, ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್‌ ಭಂಡಾರಿ, ಸರಕಾರಿ ಆಸ್ಪತ್ರೆ ಗಳಲ್ಲಿ ಡೆಂಗ್ಯೂ ಸಹಿತ ಮಲೇರಿಯಾ ಪ್ರಕರಣಗಳು ದಾಖಲಾಗಿದ್ದಲ್ಲಿ ಕೂಡಲೇ ಮಾಹಿತಿ ಲಭಿಸುತ್ತದೆ. ಖಾಸಗಿ ಆಸ್ಪತ್ರೆಗಳಿಂದ ಮಲೇರಿಯಾ ಕೇಂದ್ರಕ್ಕೆ ವರದಿ ಬಂದ ಬಳಿಕವಷ್ಟೇ ನಮಗೆ ಮಾಹಿತಿ ಸಿಗಲು ಸಾಧ್ಯ ಮತ್ತು ಆ ಕುರಿತು ಸೂಕ್ತ ಸಮೀಕ್ಷೆ, ಪರಿಶೀಲನೆ ನಡೆಸಲು ಸಾಧ್ಯವಾಗುತ್ತದೆ. ಮಿಸ್ರಿಯಾ ಪ್ರಕರಣ ಇನ್ನಷ್ಟೇ ಮಲೇರಿಯಾ ಕೇಂದ್ರಕ್ಕೆ ವರದಿಯಾಗಬೇಕಿದೆ. ಇದು ಡೆಂಗ್ಯೂ ನಿಂದಾದ ಸಾವು ಎಂದು ದೃಢಪಟ್ಟಲ್ಲಿ ಮೂಡಬಿದಿರೆ ತಾಲೂಕಿನಲ್ಲಿ ಇದೇ ಈ ಸಾಲಿನ ಮೊದಲ ಪ್ರಕರಣ. ಈ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!