Thursday, June 4, 2026
Homeಕರಾವಳಿಬಂಟ್ವಾಳ: ಲಾರಿ ಬಿಡುವಾಗಲೇ ಬಾಧಿಸಿದ ಮೂರ್ಛೆ ರೋಗ; ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು...

ಬಂಟ್ವಾಳ: ಲಾರಿ ಬಿಡುವಾಗಲೇ ಬಾಧಿಸಿದ ಮೂರ್ಛೆ ರೋಗ; ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಪೆಟ್ರೋಲ್ ಬಂಕ್ ಗೆ ನುಗ್ಗಿದ ಲಾರಿ

- Advertisement -
- Advertisement -

ಬಂಟ್ವಾಳ; ಲಾರಿ ಬಡುತ್ತಿರುವಾಗಲೇ ಡ್ರೈವರ್ ಗೆ ಮೂರ್ಛೆ ರೋಗ ಕಾಣಿಸಿಕೊಂಡು ಲಾರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ಪೆಟ್ರೋಲ್ ಬಂಕ್ ಗೆ ನುಗ್ಗಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ.

ಮಂಗಳೂರು ಕಡೆಯಿಂದ ಹಾಸನಕ್ಕೆ ಖಾಲಿ ಲಾರಿ ಹೋಗುತ್ತಿದ್ದ ವೇಳೆ ಬಿಸಿರೋಡಿನ ಪೆಟ್ರೋಲ್ ಪಂಪ್ ಬಳಿ ಚಾಲಕ ಲಕ್ಷ್ಮಣ್ ಅವರಿಗೆ ಮೂರ್ಚೆ ರೋಗ ಕಾಣಿಸಿದೆ.  ಪರಿಣಾಮ ಲಾರಿ ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಹಾಕುತ್ತಿದ್ದ ರಿಟ್ಸ್ ಕಾರಿಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ.  ಬಳಿಕ ಪೆಟ್ರೋಲ್ ಪಂಪ್ ನಲ್ಲಿ ನಿಲ್ಲಿಸಲಾಗಿದ್ದ ನ್ಯಾನೋ ಕಾರಿಗೆ ಡಿಕ್ಕಿ ಹೊಡೆದು ನಿಂತಿದೆ.

ಕೂಡಲೇ ಚಾಲಕನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

- Advertisement -

Latest News

error: Content is protected !!