Monday, June 8, 2026
Homeಕರಾವಳಿಮಂಗಳೂರು: ಪ್ರಕರಣವೊಂದರಲ್ಲಿ ಡೀಲ್‌ ಕುದುರಿಸಿದ್ದ ಮಹಿಳಾ ಕಾನ್ಸ್‌ಟೇಬಲ್‌ ಅಮಾನತು

ಮಂಗಳೂರು: ಪ್ರಕರಣವೊಂದರಲ್ಲಿ ಡೀಲ್‌ ಕುದುರಿಸಿದ್ದ ಮಹಿಳಾ ಕಾನ್ಸ್‌ಟೇಬಲ್‌ ಅಮಾನತು

- Advertisement -
- Advertisement -

ಮಂಗಳೂರು: ಗಂಡ ಹೆಂಡತಿ ಜಗಳದ ಕೇಸ್‌ನಲ್ಲಿ ಡೀಲ್‌ ಕುದುರಿಸಿದ್ದ ಮಹಿಳಾ ಕಾನ್ಸ್‌ಟೇಬಲ್‌ನ ಅಮಾನತುಗೊಳಿಸಿ ಪೊಲೀಸ್‌ ಕಮಿಷನರ್‌ ಆದೇಶ ಹೊರಡಿಸಿದ್ದಾರೆ. ವಾರದ ಹಿಂದಷ್ಟೇ ನೂತನ ಪೊಲೀಸ್‌ ಕಮಿಷನರ್‌ ಆಗಿ ಅಧಿಕಾರ ಸ್ವೀಕರಿಸಿದ ಕುಲದೀಪ್ ಆರ್. ಜೈನ್  ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದಂತಿದೆ.

ದಂಪತಿ ಜಗಳದ ಕೇಸ್‌ನಲ್ಲಿ ಹಣ ಪಡೆದು ಡೀಲ್‌ ಕುದುರಿಸಿದ್ದ ಪಾಂಡೇಶ್ವರ ಠಾಣೆಯ ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ಸಸ್ಪೆಂಡ್‌ ಆಗಿದ್ದಾರೆ. ಪ್ರಕರಣದಲ್ಲಿ ದೂರು ನೀಡಿದ್ದ ಮಹಿಳೆಯ ಗಂಡನ ಜೊತೆ ಕಾರಿನಲ್ಲಿಯೇ ಕುಳಿತು ಡೀಲ್‌ ಮಾಡಿದ್ದನ್ನು ಸಂತ್ರಸ್ತೆ ವೀಡಿಯೋ ಮಾಡಿದ್ದಾರೆ. ವೀಡಿಯೋ ಮಾಡಿದ್ದಕ್ಕೆ ಗರಂ ಆದ ಶ್ರೀಲತಾ ಆ ಮಹಿಳೆಯ ವಿರುದ್ಧವೇ ಕರ್ತವ್ಯಕ್ಕೆ ಅಡ್ಡಿಯೆಂದು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು. ಈ ಬಗ್ಗೆ ಮಹಿಳೆ ಪೊಲೀಸ್‌ ಕಮಿಷನರ್‌ಗೆ ದೂರು ನೀಡಿದ್ರು. ಕರ್ತವ್ಯಲೋಪವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪೊಲೀಸ್‌ ಕಮಿಷನರ್‌ ಶ್ರೀಲತಾರನ್ನು ಅಮಾನತುಗೊಳಿಸಿದ್ದಾರೆ.

- Advertisement -

Latest News

error: Content is protected !!