Tuesday, October 13, 2026
Homeಕರಾವಳಿಉಡುಪಿಉಡುಪಿ; ಮಲ್ಪೆ ಬೀಚ್ ಹೊಡೆತಕ್ಕೆ ಸಿಲುಕಿ ಮುಳುಗಿ ಹೋಗುತ್ತಿದ್ದ ಯುವತಿಯ ರಕ್ಷಣೆ

ಉಡುಪಿ; ಮಲ್ಪೆ ಬೀಚ್ ಹೊಡೆತಕ್ಕೆ ಸಿಲುಕಿ ಮುಳುಗಿ ಹೋಗುತ್ತಿದ್ದ ಯುವತಿಯ ರಕ್ಷಣೆ

- Advertisement -
- Advertisement -

ಉಡುಪಿ; ಮಲ್ಪೆ ಬೀಚ್ ಹೊಡೆತಕ್ಕೆ ಸಿಲುಕಿ ಮುಳುಗಿ ಹೋಗುತ್ತಿದ್ದ ಯುವತಿಯನ್ನು  ಲೈಫ್‌ಗಾರ್ಡ್‌ಗಳು ರಕ್ಷಿಸಿದ ಘಟನೆ ನಡೆದಿದೆ.

ಚಿತ್ರದುರ್ಗ ಮೂಲದ ಮಾನಗಿ ಗ್ರಾಮದ ಐಶ್ವರ್ಯಾ ( 16) ನೀರಿಗೆ ಬಿದ್ದ ಯುವತಿ. ಈಕೆ ಸಮುದ್ರ ತೀರದ ಬಳಿ ನೀರಿನಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಬೃಹತ್ ಅಲೆ ಅಪ್ಪಳಿಸಿದೆ. ಈ ವೇಳೆ, ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಿದ್ದಳು. ಕೂಡಲೇ ಯುವತಿಯನ್ನು ರಕ್ಷಿಸಲು ಕಾರ್ಯಾಚರಣೆಗಿಳಿದ ಲೈಫ್‌ಗಾರ್ಡ್ ಮತ್ತು ಈಶ್ವರ್ ಮಲ್ಪೆ ಅವರು ಯುವತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯುವತಿಯನ್ನು ಸಮುದ್ರದಿಂದ ರಕ್ಷಿಸಿ ದಡಕ್ಕೆ ತಂದು ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಪ್ಪು ನೀರು ಕುಡಿದಿದ್ದರಿಂದ ಆಕೆ ಅಸ್ವಸ್ಥಳಾಗಿದ್ದಳು ಎನ್ನಲಾಗಿದೆ.

- Advertisement -

Latest News

error: Content is protected !!