Thursday, June 4, 2026
Homeಕರಾವಳಿಕಡಬ; ಕಾಣಿಯೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವಪತ್ತೆ

ಕಡಬ; ಕಾಣಿಯೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವಪತ್ತೆ

- Advertisement -
- Advertisement -

ಕಡಬ;  ವ್ಯಕ್ತಿಯೋರ್ವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕುಂಬ್ಲಾಡಿ ಎಂಬಲ್ಲಿ ನಡೆದಿದೆ.ಗದಗ ಜಿಲ್ಲೆಯ ಗೋವಿಂದ (55) ಮೃತ ವ್ಯಕ್ತಿ.

ಗೋವಿಂದ ಅವರನ್ನು ಕೃಷಿ ಹಾಗೂ ಕೋಳಿ ಫಾರಂ ನೋಡಿಕೊಳ್ಳಲು ನೇಮಿಸಿಕೊಳ್ಳಲಾಗಿತ್ತು. ಅವರು  ಆರು ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಫೆ. 21ರಂದು ಗೋವಿಂದ ಊರಿಗೆ ಹೋಗುವುದಾಗಿ 5000 ರೂ. ಪಡೆದಿದ್ದರು. ಫೆ. 25ರಂದು ಸತ್ಯಪ್ರಸಾದ್‌ ಅವರು ತಮ್ಮ ಕೃಷಿ ತೋಟಕ್ಕೆ ನೀರು ಬಿಡಲು ತೋಟಕ್ಕೆ ಹೋದಾಗ ವಾಸನೆ ಬರುತ್ತಿದ್ದು ಹತ್ತಿರ ಹೋಗಿ ನೋಡಿದಾಗ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಕಂಡು ಬಂತು. ಪರಿಶೀಲಿಸಿದಾಗ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಗೋವಿಂದ ಅವರ ಮೃತದೇಹ ಅನ್ನೋದು ಗೊತ್ತಾಗಿದೆ.ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!