Thursday, June 4, 2026
Homeತಾಜಾ ಸುದ್ದಿಮನೀಶ್ ಸಿಸೋಡಿಯಾ ಮಾರ್ಚ್ 4ರವರೆಗೆ ಸಿಬಿಐ ಕಸ್ಟಡಿಗೆ

ಮನೀಶ್ ಸಿಸೋಡಿಯಾ ಮಾರ್ಚ್ 4ರವರೆಗೆ ಸಿಬಿಐ ಕಸ್ಟಡಿಗೆ

- Advertisement -
- Advertisement -

ದೆಹಲಿ: ಹೊಸ ಮದ್ಯನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಆರೋಪದ ಮೇಲೆ ಬಂಧಿತರಾಗಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಕಸ್ಟಡಿಯಲ್ಲಿರಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಮದ್ಯದ ಹಗರಣದಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಆರೋಪಪಟ್ಟಿಯಲ್ಲಿ ಆರೋಪಿ ನಂಬರ್ ಒನ್ ಎಂದು ಹೆಸರಿಸಲಾಗಿದ್ದು ನಿನ್ನೆ ಇವರ ಬಂಧನವಾಗಿತ್ತು. ಸಿಸೋಡಿಯಾ ಅವರನ್ನು ಐದು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಸಿಬಿಐ ಕೋರಿತ್ತು. ಇದೀಗ ಮಾರ್ಚ್ 4ರವರೆಗೆ ಸಿಸೋಡಿಯಾರನ್ನು ಸಿಬಿಐ ಕಸ್ಟಡಿಯಲ್ಲಿರಿಸಿ ಆದೇಶ ನೀಡಿದೆ.

- Advertisement -

Latest News

error: Content is protected !!