Tuesday, June 9, 2026
Homeಕರಾವಳಿಬಂಟ್ವಾಳ: ಇತ್ತೀಚಿಗೆ  ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಸಂಪೂರ್ಣ ಬೆಂಕಿಗಾಹುತಿಯಾದ ಪ್ರಕರಣ;  ಮನೆ ಕಳೆದುಕೊಂಡವರಿಗೆ ಮನೆ...

ಬಂಟ್ವಾಳ: ಇತ್ತೀಚಿಗೆ  ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಸಂಪೂರ್ಣ ಬೆಂಕಿಗಾಹುತಿಯಾದ ಪ್ರಕರಣ;  ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ ಶಾಸಕ ರಾಜೇಶ್ ನಾಯ್ಕ್

- Advertisement -
- Advertisement -

ಬಂಟ್ವಾಳ;  ಮಾಣಿ ಗ್ರಾಮದ ರಮಾ ಆಶೋಕ್ ಪೂಜಾರಿ ಅವರ ಮನೆಗೆ ಇತ್ತೀಚಿಗೆ  ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು.  ಘಟನಾ ಸ್ಥಳಕ್ಕೆ ಫೆ.24 ರಂದು ಶುಕ್ರವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರು ಭೇಟಿ ಸಂಪೂರ್ಣ ಮನೆ ನಿರ್ಮಾಣದ ಭರವಸೆ ನೀಡಿದ್ದಾರೆ.

 ಆರ್ಥಿಕ ವಾಗಿ ಬಡವರಾಗಿರುವ ಈ ಕುಟುಂಬಕ್ಕೆ ಶಾಸಕರು ಮನೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ.   ಸ್ಥಳೀಯ ಬಿಜೆಪಿ ಪ್ರಮುಖ ರು ಮನೆ ನಿರ್ಮಾಣದ ಜವಾಬ್ದಾರಿ ವಹಿಸಿ ಕೊಳ್ಳುವಂತೆ ಅವರು ತಿಳಿಸಿದರು.

ನಾರಾಯಣ ಶೆಟ್ಟಿ ತೋಟ, ರಾಧಾಕೃಷ್ಣ ಅಡ್ಯಂತಾಯ, ಗಣೇಶ್ ರೈ ಮಾಣಿ, ಹರೀಶ್ ಕುಲಾಲ್ ‌ಮಾಣಿ ಮತ್ತಿತರರು ಹಾಜರಿದ್ದರು.

- Advertisement -

Latest News

error: Content is protected !!