Saturday, June 6, 2026
Homeಕರಾವಳಿಮಂಗಳೂರು; ಬಾಲ ಮಂದಿರದಲ್ಲಿದ್ದ ಬಾಲಕ ನಾಪತ್ತೆ

ಮಂಗಳೂರು; ಬಾಲ ಮಂದಿರದಲ್ಲಿದ್ದ ಬಾಲಕ ನಾಪತ್ತೆ

- Advertisement -
- Advertisement -

ಮಂಗಳೂರು: ಬಾಲಮಂದಿರದಲ್ಲಿದ್ದ ಬಾಲಕ ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಬಸವರಾಜ್‌ (17) ಬಾಲಮಂದಿರದಲ್ಲಿದ್ದ. ಅಲ್ಲಿಂದ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ಸೇರಿದ್ದ. ಈ ವೇಳೆ ಅಲ್ಲಿಂದ ನಾಪತ್ತೆಯಾಗಿದ್ದಾನೆ.

ಬೋಂದೆಲ್‌ ಕೃಷ್ಣನಗರ ಬಾಲ ಮಂದಿರಕ್ಕೆ ಫೆ. 21ರಂದು ದಾಖಲಾ ಗಿದ್ದು, ಅಂದು ರಾತ್ರಿ 7 ಗಂಟೆ ವೇಳೆ ಸೋಪು ತಿಂದು ಅಸ್ವಸ್ಥನಾಗಿದ್ದ. ತತ್‌ಕ್ಷಣ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಆರೋಗ್ಯದ ಮೇಲೆ ನಿಗಾ ಇರಿಸಲು 2-3 ದಿನ ಒಳರೋಗಿಯಾಗಿ ದಾಖಲಿಸಿದ್ದರು. ಫೆ. 21ರಂದು ರಾತ್ರಿ 7.15ರ ವೇಳೆಗೆ ಕೈ ತೊಳೆಯಲಿದೆ ಎಂದು ಹೇಳಿ ಹೊರಗಡೆ ಬಂದ ಆತ, ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಆಸ್ಪತ್ರೆಯ ಕಾವಲುಗಾರರನ್ನು ವಿಚಾರಿಸಿ ಸುತ್ತಮುತ್ತ ಹುಡುಕಿದರೂ ಪತ್ತೆಯಾಗಿಲ್ಲ.

ಅಲ್ಲಿಂದ ಮನೆಗೂ ಹೋಗದೆ ನಾಪತ್ತೆಯಾಗಿದ್ದಾನೆ. ಈ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ನೀಲಿ ಬಣ್ಣದ ಉದ್ದ ಕೈ ಟಿ-ಶರ್ಟ್‌, ಕಪ್ಪು ಪ್ಯಾಂಟ್‌ ಧರಿಸಿದ್ದು, ಕನ್ನಡ ಭಾಷೆ ಬಲ್ಲವನಾಗಿದ್ದಾನೆ. ಈತನ ಬಗ್ಗೆ ಮಾಹಿತಿ ಇದ್ದಲ್ಲಿ ಪಾಂಡೇಶ್ವರ ಠಾಣೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

- Advertisement -

Latest News

error: Content is protected !!