Thursday, June 4, 2026
Homeತಾಜಾ ಸುದ್ದಿಐಪಿಎಸ್ ಅಧಿಕಾರಿ ಡಿ. ರೂಪ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜಗಳಕ್ಕೆ ಮತ್ತೊಂದು ಟ್ವಿಸ್ಟ್;...

ಐಪಿಎಸ್ ಅಧಿಕಾರಿ ಡಿ. ರೂಪ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜಗಳಕ್ಕೆ ಮತ್ತೊಂದು ಟ್ವಿಸ್ಟ್; ಸಿ ಎಸ್ ವಂದಿತಾ ಶರ್ಮಾ ಜೊತೆ ರೂಪ ನಡೆಸಿದ ವಾಟ್ಸಾಪ್ ಚಾಟ್ ವೈರಲ್

- Advertisement -
- Advertisement -

ಬೆಂಗಳೂರು : ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಗಲಾಟೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇಬ್ಬರ ವರ್ಗಾವಣೆ ನಡುವೆಯೇ ಮತ್ತೊಂದು ‘ವಾಟ್ಸಾಪ್ ಚಾಟ್’ ವೈರಲ್ ಆಗಿದೆ.

ಈಗಾಗಲೇ ರೋಹಿಣಿ ಸಿಂಧೂರಿಯ ಹಲವು ವಾಟ್ಸಾಪ್ ಚಾಟ್ ಲಿಸ್ಟ್ ಗಳನ್ನ ಐಪಿಎಸ್ ಅಧಿಕಾರಿ ಡಿ ರೂಪ ಬಿಡುಗಡೆ ಮಾಡಿದ್ದರು.ಇದೀಗ ಇಬ್ಬರು ಅಧಿಕಾರಿಗಳ ವರ್ಗಾವಣೆಗೂ ಮುನ್ನ ಡಿ ರೂಪ-ಸಿ ಎಸ್ ವಂದಿತಾ ಶರ್ಮಾ ಜೊತೆ ನಡೆಸಿದ್ದರು ಎನ್ನಲಾದ ವಾಟ್ಸಪ್ ಚಾಟ್ ಲಿಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಿಎಸ್ ವಂದಿತಾ ಜೊತೆ ಮಾಡಿರುವ ವಾಟ್ಸಪ್ ಚಾಟ್ ಲಿಸ್ಟ್ ನ ಫೋಟೋಗಳಲ್ಲಿ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಕಡೆ ಅವರನ್ನು ವರ್ಗಾವಣೆ ಮಾಡಿ ಎಂದು ಸಿಎಸ್ ಗೆ ರೂಪ ಮನವಿ ಮಾಡಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!