Saturday, June 6, 2026
Homeತಾಜಾ ಸುದ್ದಿಟ್ರಾಫಿಕ್ ದಂಡ ರಿಯಾಯತಿ ಸೌಲಭ್ಯವನ್ನು ಮತ್ತೆ 15 ದಿನಗಳ ಕಾಲ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ...

ಟ್ರಾಫಿಕ್ ದಂಡ ರಿಯಾಯತಿ ಸೌಲಭ್ಯವನ್ನು ಮತ್ತೆ 15 ದಿನಗಳ ಕಾಲ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ

- Advertisement -
- Advertisement -

ಬೆಂಗಳೂರು: ಟ್ರಾಫಿಕ್ ದಂಡ ರಿಯಾಯತಿ ಸೌಲಭ್ಯವನ್ನು ಮತ್ತೆ 15 ದಿನಗಳ ಕಾಲ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಮಾಡಿದೆ .

ಈ ಕುರಿತಂತೆ ಇಂದು ಅಧಿಕೃತ ಆದೇಶ ಹೊರಡಿಸಿದ್ದು, ಸಂಚಾರ ನಿಯಮ ಉಲ್ಲಂಘನೆಯ ದಂಡದಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ಸರ್ಕಾರ ದಿನಾಂಕ 11-02-2023ರವರೆಗೆ ನೀಡಲಾಗಿತ್ತು ಎಂದಿದೆ.ಜನಸಾಮಾನ್ಯರಿಂದ ರಿಯಾಯಿತಿಯ ಕಾಲಾವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಲಾಗಿತ್ತು. ರಾಜ್ಯದ ಜನತೆಯ ಮನವಿಯ ಹಿನ್ನಲೆಯಲ್ಲಿ ಟ್ರಾಫಿಕ್ ಫೈನ್ ನ ಶೇ.50ರಷ್ಟು ರಿಯಾಯಿತಿಯನ್ನು ಮತ್ತೆ 15 ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ಹೇಳಿದೆ.

ಸಂಚಾರ ನಿಯಮ ಉಲ್ಲಂಘಿಸಿ ದಾಖಲಾಗಿರುವಂತ ದಂಡದಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ಮತ್ತೆ 15 ದಿನಗಳ ವರೆಗೆ ವಿಸ್ತರಿಸಿರೋ ಕಾರಣ, ವಾಹನ ಸವಾರರು ಇದರ ಸದುಪಯೋಗ ಪಡಿಸಿಕೊಂಡು, ದಂಡವನ್ನು ಪಾವತಿಸುವಂತೆ ಮನವಿ ಮಾಡಿದೆ.

- Advertisement -

Latest News

error: Content is protected !!