Wednesday, June 3, 2026
Homeತಾಜಾ ಸುದ್ದಿ30 ವರ್ಷ ದಾಟಿದ್ರೂ ರೈತರ ಮಕ್ಕಳಿಗೆ ಹೆಣ್ಣು ಸಿಕ್ತಿಲ್ಲ ಅಂತಾ ಮಾದಪ್ಪನ ಬೆಟ್ಟಕ್ಕೆ ಪಾದಾಯಾತ್ರೆ ಹೊರಟ...

30 ವರ್ಷ ದಾಟಿದ್ರೂ ರೈತರ ಮಕ್ಕಳಿಗೆ ಹೆಣ್ಣು ಸಿಕ್ತಿಲ್ಲ ಅಂತಾ ಮಾದಪ್ಪನ ಬೆಟ್ಟಕ್ಕೆ ಪಾದಾಯಾತ್ರೆ ಹೊರಟ ಯುವಕರು

- Advertisement -
- Advertisement -

ಮಂಡ್ಯ : 30 ವರ್ಷ ದಾಟಿದ್ರೂ ರೈತರ ಮಕ್ಕಳಿಗೆ ಹೆಣ್ಣು ಸಿಕ್ತಿಲ್ಲ ಅಂತಾ ಯುವಕರು ಪಾದೆಯಾತ್ರೆ ಮೂಲಕ ಮಾದಪ್ಪನ ಮೊರೆ ಹೋಗಿದ್ದಾರೆ.  

ಮಂಡ್ಯ ಜಿಲ್ಲೆಯ ಕೆ.ಎಂ ದೊಡ್ಡಿಯಿಂದ ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ ಹೆಸರಿನಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.

ಈ ಪಾದಯಾತ್ರೆಯಲ್ಲಿ ಮಂಡ್ಯ ಮಾತ್ರವಲ್ಲದೇ ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಕಡೆಯಿಂದ ಬ್ರಹ್ಮಚಾರಿಗಳು ಭಾಗಿಯಾಗಲಿದ್ದಾರೆ. ಇನ್ನೂ, ಈ ಯಾತ್ರೆಯಲ್ಲಿ ವಿವಾಹಿತರು ಭಾಗಿಯಾಗುವಂತಿಲ್ಲ, 30 ವರ್ಷ ಮೀರಿದ ಬ್ರಹ್ಮಚಾರಿಗಳು ಮಾತ್ರ ಯಾತ್ರೆಯಲ್ಲಿ ಭಾಗವಹಿಸಬಹುದಾಗಿದೆ.

- Advertisement -

Latest News

error: Content is protected !!