Thursday, June 4, 2026
Homeಕರಾವಳಿತೊಕ್ಕೊಟ್ಟು: ಕೌಟುಂಬಿಕ ಕಲಹದ ಹಿನ್ನೆಲೆ, ಮಾಂಸದಂಗಡಿ ಮಾಲಿಕನ ಮೇಲೆ ತಲವಾರಿನಿಂದ ಹಲ್ಲೆ

ತೊಕ್ಕೊಟ್ಟು: ಕೌಟುಂಬಿಕ ಕಲಹದ ಹಿನ್ನೆಲೆ, ಮಾಂಸದಂಗಡಿ ಮಾಲಿಕನ ಮೇಲೆ ತಲವಾರಿನಿಂದ ಹಲ್ಲೆ

- Advertisement -
- Advertisement -

ಉಳ್ಳಾಲ: ಮಾಂಸದಂಗಡಿ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ತಲವಾರು ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ತಡರಾತ್ರಿ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ.

ಹಳೆಕೋಟೆ ನಿವಾಸಿ ನಝೀರ್(47) ಹಲ್ಲೆಗೆ ಒಳಗಾದ ವ್ಯಕ್ತಿ.

ಇವರು ತೊಕ್ಕೊಟ್ಟು ಒಳಪೇಟೆಯತ್ತ ಬೀಡಾ ತಿನ್ನಲು ಬಂದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಇವರ ಮೇಲೆ ತಲವಾರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗಾಯಾಳುವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

- Advertisement -

Latest News

error: Content is protected !!