Thursday, June 4, 2026
Homeಕರಾವಳಿಮಂಗಳೂರು; ಕೊರಗಜ್ಜನ ಕೋಲ ಹಿನ್ನೆಲೆ ;  ರೋಡ್ ಶೋ ರದ್ದು ಮಾಡಿದ ಅಮಿತ್ ಶಾ

ಮಂಗಳೂರು; ಕೊರಗಜ್ಜನ ಕೋಲ ಹಿನ್ನೆಲೆ ;  ರೋಡ್ ಶೋ ರದ್ದು ಮಾಡಿದ ಅಮಿತ್ ಶಾ

- Advertisement -
- Advertisement -

ಮಂಗಳೂರು;ಫೆಬ್ರವರಿ 11 ರಂದು ಗೃಹ ಸಚಿವ ಅಮಿತ್ ಶಾ ಅವರು ಪುತ್ತೂರಿಗೆ ಆಗಮಿಸುತ್ತಿದ್ದು ಈ ಹಿನ್ನೆಲೆ ಭರ್ಜರಿ ತಯಾರಿ ನಡೆಯುತ್ತಿದೆ.

ಇನ್ನು ಅಮಿತ್ ಶಾ ಭೇಟಿ ಹಿನ್ನೆಲೆ ಮಂಗಳೂರಿನಲ್ಲಿ ಒಂದು ಕಡೆ ರೋಡ್ ಶೋ ನಡೆಸಲು ನಿರ್ಧರಿಸಲಾಗಿತ್ತು. ಕಾವೂರಿನಿಂದ ಪದವಿನಂಗಡಿ ಮೇರಿಹಿಲ್ ವರೆಗೆ ಸುಮಾರು ಎರಡೂವರೆ ಕಿಮೀ ಉದ್ದಕ್ಕೆ ರೋಡ್ ಶೋ ನಲ್ಲಿ ಅಮಿತ್ ಶಾ ಭಾಗವಹಿಸುವುದು ಫಿಕ್ಸ್ ಆಗಿತ್ತು. ಇದರ ನಡುವೆ ಪದವಿನಂಗಡಿ ನಡುವೆ ಬರುವ ಕೊರಗಜ್ಜನ ಗುಡಿಯಲ್ಲಿ ಫೆ.11 ರಂದು ಕೋಲ ನಡೆಯುವ ವಿಷಯ ಗೊತ್ತಾಗಿದೆ. ಅಂದು ರೋಡ್ ಶೋ ನಡೆಸಿದರೆ ಕೋಲಕ್ಕೆ ಹಾಗೂ ಅಲ್ಲಿನ ಜನರಿಗೆ ತೊಂದರೆಯಾಗುತ್ತದೆ ಎಂದು ಭಾವಿಸಿ ಬಿಜೆಪಿ ನಾಯಕರು ಅಮಿತ್ ಶಾಗೆ ವಿಷಯ ತಿಳಿಸಿದ್ದಾರೆ. ಕೊರಗಜ್ಜನ ಕೋಲಕ್ಕೆ ತೊಂದರೆಯಾಗುವುದಾದರೆ ರೋಡ್ ಶೋ ವನ್ನೇ ರದ್ದು ಮಾಡಿ ಎಂದು ಅಮಿತ್ ಶಾ ಬಿಜೆಪಿ ನಾಯಕರಿಗೆ ಹೇಳಿದ್ದಾರೆ ಎನ್ನಲಾಗಿದೆ.

 ಈ ಹಿನ್ನೆಲೆ ಮಂಗಳೂರಿನಲ್ಲಿ ಆಯೋಜನೆಗೊಂಡ ರೋಡ್ ಶೋ ರದ್ದು ಮಾಡಲಾಗಿದ್ದು, ಇನ್ನೊಂದು ಕಡೆ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ.

- Advertisement -

Latest News

error: Content is protected !!