Friday, June 5, 2026
Homeತಾಜಾ ಸುದ್ದಿದಾವಣಗೆರೆಯಲ್ಲಿ ಬಿಜೆಪಿ ಬೃಹತ್ ಮಹಾ ಸಂಗಮ ಸಮಾವೇಶ ; ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ

ದಾವಣಗೆರೆಯಲ್ಲಿ ಬಿಜೆಪಿ ಬೃಹತ್ ಮಹಾ ಸಂಗಮ ಸಮಾವೇಶ ; ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ

- Advertisement -
- Advertisement -

ಬೆಂಗಳೂರು : ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ವಿವಿಧ ಯಾತ್ರೆ, ರ್ಯಾಲಿಗ ಮೂಲಕ ಮತದಾರರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿವೆ. ಬಿಜೆಪಿ ಕೂಡ ಮತ್ತೆ ಅಧಿಕಾರಕ್ಕೆ ಬರಲು ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೀಗಿರುವಾಗಲೇ ಬಿಜೆಪಿ ದಾವಣಗೆರೆಯಲ್ಲಿ ಬೃಹತ್ ಮಹಾ ಸಂಗಮ ಸಮಾವೇಶವನ್ನು ಹಮ್ಮಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಫೆಬ್ರವರಿ ತಿಂಗಳ ಅಂತ್ಯದಿಂದ ರಾಜ್ಯದ ನಾಲ್ಕು ಭಾಗಗಳಿಂದ ರಥಯಾತ್ರೆ ಮಾದರಿಯ ವಿಜಯ ಸಂಕಲ್ಪ ಯಾತ್ರೆ ಆರಂಭಿಸಲಿದೆ. ಮಾರ್ಚ್ ಮೂರನೇ ವಾರದ ವೇಳೆಗೆ ಈ ಯಾತ್ರೆ ದಾವಣಗೆರೆಯಲ್ಲಿ ಅಂತ್ಯಗೊಂಡು ಮಹಾ ಸಂಗಮ ನಡೆಯಲಿದೆ. ಮಹಾ ಸಂಗಮ ಸಮಾವೇಶದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹೈಕಮಾಂಡ್ ನಾಯಕರೂ ಭಾಗಿಯಾಗಲಿದ್ದಾರೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ವಿಜಯಸಂಕಲ್ಪ ಯಾತ್ರೆ ಸಲುವಾಗಿ ವಿವಿಧ ನಾಯಕರನ್ನು ಒಳಗೊಂಡ 4 ತಂಡಗಳನ್ನು ರಚಿಸಲಾಗುತ್ತದೆ. ಈ ನಾಲ್ಕು ತಂಡಗಳು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೆ ಮೈಸೂರು ಪ್ರದೇಶದಲ್ಲಿ ಎರಡು ಭಾಗಗಳಾಗಿ ಪ್ರವಾಸ ಕೈಗೊಳ್ಳಲಾಗುವುದು. ಬಳಿಕ ಮಾರ್ಚ್ ಮೂರನೇ ವಾರ ದಾವಣಗೆರೆಯಲ್ಲಿ ಮಹಾಸಂಗಮ ಸಮಾವೇಶ ನಡೆಯಲಿದೆ.

- Advertisement -

Latest News

error: Content is protected !!