Sunday, June 7, 2026
Homeಕರಾವಳಿಮಂಗಳೂರು: ಭ್ರಷ್ಟಾಚಾರದ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆ: ಪೊಲೀಸರಿಂದ ಮಾನಸಿಕ ಕಿರುಕುಳ: ಕಬೀರ್‌ ಉಳ್ಳಾಲ್‌...

ಮಂಗಳೂರು: ಭ್ರಷ್ಟಾಚಾರದ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆ: ಪೊಲೀಸರಿಂದ ಮಾನಸಿಕ ಕಿರುಕುಳ: ಕಬೀರ್‌ ಉಳ್ಳಾಲ್‌ ಆರೋಪ

- Advertisement -
- Advertisement -

ಮಂಗಳೂರು: ಮಂಗಳೂರು ಪೊಲೀಸ್ ಕಮೀಷನರ್ ಹಾಗೂ ಉಳ್ಳಾಲ ಪೊಲೀಸರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಪೊಲೀಸರು ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಮಾಹಿತಿ ಹಕ್ಕು ಕಾರ್ಯಕರ್ತ ಕಬೀರ್‌ ಉಳ್ಳಾಲ್‌ ಆರೋಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಮೂರು ಪ್ರಕರಣಗಳಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಹಾಗೂ ಉಳ್ಳಾಲ ಪೊಲೀಸರ ಭ್ರಷ್ಟಾಚಾರದ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಅದಕ್ಕೆ ನನಗೆ ಪೊಲೀಸರು ಪದೇ ಪದೇ ನೋಟಿಸ್‌ ನೀಡುವ ಮೂಲಕ ಮಾನಸಿಕ ಕಿರುಕುಳ ಕೊಡ್ತಿದ್ದಾರೆ. ಏನೇ ಆದ್ರೂ ನಾನಂತೂ ಈ ಪ್ರಕರಣದಿಂದ ಹಿಂದೆ ಸರಿಯಲ್ಲ. ನನ್ನ ಹೋರಾಟ ಮುಂದುವರೆಸುತ್ತೇನೆ ಎಂದರು.

- Advertisement -

Latest News

error: Content is protected !!