Sunday, October 18, 2026
Homeಕರಾವಳಿಬಂಟ್ವಾಳ: ಮಾಣಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆಗೆ ತೆರೆ

ಬಂಟ್ವಾಳ: ಮಾಣಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆಗೆ ತೆರೆ

- Advertisement -
- Advertisement -

ಬಂಟ್ವಾಳ: ಐತಿಹಾಸ ಪ್ರಸಿದ್ಧ ಮಾಣಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆ ಇಂದು ಅಂದರೆ ಫೆ. 6 ರಂದು ಪೂರ್ವ ಸಂಪ್ರದಾಯದಂತೆ ಸಂಪನ್ನಗೊಂಡಿತು.

ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಜ.30 ರಂದು ಗೊನೆ ಕಡಿದು, ಫೆ.5 ರ ಮಂಗಳವಾರ ರಾತ್ರಿ 10 ಗಂಟೆಗೆ ಭಂಡಾರವೇರಿ, ಫೆ.6 ರ ಸೋಮವಾರ ಬೆಳಿಗ್ಗೆ 9 ಗಂಟೆಗೆ ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿಮೆಚ್ಚಿ ಜಾತ್ರೆಯು ನಡೆಯಿತು. ಮತ್ತು ಸಂಜೆ 4 ರಿಂದ ಶ್ರಿ ಗುಡ್ಡೆ ಚಾಮುಂಡಿ- ಪಂಜುರ್ಲಿ ದೈವಗಳ ನೇಮ ನಡೆಯಿತು.

ಬಳಿಕ ಬಂಟ್ವಾಳ ‌ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ‌ ಸಚಿವ ಬಿ.ರಮಾನಾಥ ರೈ ಸೇರಿದಂತೆ ಅನೇಕ ಗಣ್ಯರು ದೈವದ ಪ್ರಸಾದ ಸ್ವೀಕರಿಸಿದರು.ಆಡಳಿತ ಮೊಕ್ತೇಸರ ಮಾಣಿ ಗುತ್ತು ಸಚಿನ್ ರೈ ಉಪಸ್ಥಿತರಿದ್ದರು ಮತ್ತು ಸಂಬಂಧ ಪಟ್ಟ ಗುತ್ತಿನ ಪ್ರಮುಖರು ಉಪಸ್ಥಿತರಿದ್ದರು

- Advertisement -

Latest News

error: Content is protected !!