Monday, June 8, 2026
Homeಕರಾವಳಿಮಂಗಳೂರು: ವಿವಾದಾತ್ಮಕ ಹೇಳಿಕೆ ಕೊಟ್ಟ ಶರಣ್‌ ಪಂಪ್‌ವೆಲ್‌ಗೆ ಎದುರಾದ ಸಂಕಷ್ಟ

ಮಂಗಳೂರು: ವಿವಾದಾತ್ಮಕ ಹೇಳಿಕೆ ಕೊಟ್ಟ ಶರಣ್‌ ಪಂಪ್‌ವೆಲ್‌ಗೆ ಎದುರಾದ ಸಂಕಷ್ಟ

- Advertisement -
- Advertisement -

ಮಂಗಳೂರು: ಪ್ರವೀಣ್‌ ನೆಟ್ಟಾರು ಹತ್ಯೆಯ ಪ್ರತೀಕಾರವಾಗಿಯೇ ಸುರತ್ಕಲ್‌ನಲ್ಲಿ ಫಾಝೀಲ್‌ ಹತ್ಯೆಯಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಹೆಚ್‌ಪಿ ಮುಖಂಡ ಶರಣ್‌ ಪಂಪ್‌ವೆಲ್‌ಗೆ ಇದೀಗ ಸಂಕಷ್ಟ ಎದುರಾಗಿದೆ. ಬಜರಂಗದಳದ ಶೌರ್ಯ ಯಾತ್ರೆಯಲ್ಲಿ ಹೀಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಶರಣ್‌ ಪಂಪ್‌ವೆಲ್‌ ವಿರುದ್ಧ ಫಾಝಿಲ್‌ ತಂದೆ ಉಮಾರ್‌ ಫಾರೂಕ್‌ ಬಂಧಿಸುವಂತೆ ಮಂಗಳೂರು ಕಮಿಷನರ್‌ ಶಶಿಕುಮಾರ್‌ ಬಳಿ ಆಗ್ರಹಿಸಿದ್ದಾರೆ.

ತನ್ನ ಮಗನ ಹತ್ಯೆಯನ್ನು ಸಮರ್ಥಿಸಿಕೊಂಡಿರುವ ಶರಣ್‌ ಪಂಪ್‌ವೆಲ್‌ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಹತ್ಯೆ ಶರಣ್‌ ಅಣತಿಯಂತೆ ನಡೆದಿರುವ ಬಗ್ಗೆ ತಮಗೆ ಅನುಮಾನವಿದೆ. ಶರಣ್‌ರನ್ನ ಬಂಧಿಸಿ ವಿಚಾರಣೆ ನಡೆಸುವಂತೆ ಕಮಿಷನರ್‌ಗೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!