Saturday, June 6, 2026
Homeಕರಾವಳಿಮಂಗಳೂರು: ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ನೇಣಿಗೆ ಶರಣಾದ ಪತಿ

ಮಂಗಳೂರು: ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ನೇಣಿಗೆ ಶರಣಾದ ಪತಿ

- Advertisement -
- Advertisement -

ಮಂಗಳೂರು: ಪತ್ನಿಯನ್ನು ಕೊಲೆ ಮಾಡಿ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬಿಜೈ ಬಳಿಯ ಕಾಪಿಕಾಡ್‌ ನಾಲ್ಕನೇ ಕ್ರಾಸ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದಿದೆ.

ಶೈಲಜಾ ರಾವ್‌ ಹಾಗೂ ದಿನೇಶ್‌ ರಾವ್‌ ಮೃತಪಟ್ಟ ದಂಪತಿ. ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ನಂತರ ದಿನೇಶ್‌ ರಾವ್‌ ನೇಣಿಗೆ ಶರಣಾಗಿದ್ದಾರೆ. ಇನ್ನು ದಿನೇಶ್‌ ಕೆನರಾ ಬ್ಯಾಂಕ್‌ ಉದ್ಯೋಗಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!