Thursday, June 4, 2026
Homeತಾಜಾ ಸುದ್ದಿಛಾಲೆಂಜಿಂಗ್ ಸ್ಟಾರ್ ದರ್ಶನ್ ಫಾರ್ಮ್ ಹೌಸ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ

ಛಾಲೆಂಜಿಂಗ್ ಸ್ಟಾರ್ ದರ್ಶನ್ ಫಾರ್ಮ್ ಹೌಸ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ

- Advertisement -
- Advertisement -

ಮೈಸೂರು: ಕ್ರಾಂತಿ ಸಿನಿಮಾದ ಬಿಡುಗಡೆಯ ಖುಷಿಯಲ್ಲಿರು ಛಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಬಿಗ್ ಶಾಕ್ ಎದುರಾಗಿದೆ. ದಾಸನ ಫಾರ್ಮ್ ಹೌಸ್ ಮೇಲೆ ಅರಣ್ಯ ಸಂಚಾರಿದಳದ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ 4 ಬಾತುಕೋಳಿಗಳ ವಿಶಿಷ್ಟ ಪ್ರಭೇದದ ಜಲಪಕ್ಷಿಗಳನ್ನು ವಶಪಡಿಸಿಕೊಂಡಿದ್ದಾರೆ.

ಮೊನ್ನೆ ರಾತ್ರಿ ದಾಳಿಯನ್ನು ಮಾಡಲಾಗಿದ್ದು, ಎಲ್ಲಿ ಕೂಡ ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧ ಎನ್ನಲಾಗಿದೆ.ಇದಲ್ಲದೇ ನಟ ದರ್ಶನ್‌ ಅವರ ಫಾರ್ಮ್‌ ಹೌಸ್‌ನಲ್ಲಿ ಇರುವ ಕೆಲವು ಪ್ರಾಣಿಪಕ್ಷಿಗಳ ಬಗ್ಗೆ ಕೂಡ ಅರಣ್ಯ ಇಲಾಖೆ ಮಾಹಿತಿ ಕೇಳಿದ್ದು, ಮಾಲೀಕತ್ವವನ್ನು ತಿಳಿಸುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಇನ್ನು ಇತ್ತೀಚೆಗೆ ದರ್ಶನ್ ಅವರು ತಮ್ಮ ಫಾರ್ಮ್ ಹೌಸ್ ಬಗ್ಗೆ ಯೂ ಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು.  ಈ ವೇಳೆ ತಮ್ಮ ಫಾರ್ಮ್ ಹೌಸ್ ನಲ್ಲಿರುವ ವಿವಿಧ ಪ್ರಬೇಧಗಳ ಪಕ್ಷಿಗಳು ಹಾಗೂ ಪ್ರಾಣಿಗಳ ಬಗ್ಗೆ ಮಾಹಿತಿ ನೀಡಿದ್ದರು. ಅದರ ಬೆನ್ನಲ್ಲೇ ಈ ದಾಳಿ ನಡೆದಿದೆ ಎನ್ನಲಾಗಿದೆ.

- Advertisement -

Latest News

error: Content is protected !!