Saturday, June 6, 2026
Homeಕರಾವಳಿಉಡುಪಿಮಲ್ಪೆ: ಸೈಂಟ್‌ ಮೇರೀಸ್‌ ದ್ವೀಪದಲ್ಲಿ ಪ್ರವಾಸಿಗನ ಮೇಲೆ ಸಿಬ್ಬಂದಿ ದರ್ಪ

ಮಲ್ಪೆ: ಸೈಂಟ್‌ ಮೇರೀಸ್‌ ದ್ವೀಪದಲ್ಲಿ ಪ್ರವಾಸಿಗನ ಮೇಲೆ ಸಿಬ್ಬಂದಿ ದರ್ಪ

- Advertisement -
- Advertisement -

ಮಲ್ಪೆ: ಪ್ರವಾಸಿಗನ ಮೇಲೆ ಸಿಬ್ಬಂದಿ ದರ್ಪ ತೋರಿದ ಘಟನೆ ಉಡುಪಿ ಸೈಂಟ್ ಮೇರೀಸ್ ದ್ವೀಪದಲ್ಲಿ ನಡೆದಿದ್ದು ಘಟನೆಯ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ದ್ವೀಪದೊಳಗಡೆ ಕ್ಯಾಮರಾ ನಿಷೇಧವಿದ್ದರೂ, ಶುಲ್ಕ ಪಾವತಿಸಿ ಲಗೇಜ್ ರೂಂನಲ್ಲಿ ಕ್ಯಾಮರಾ ಇಡಬಹುದು. ಆದರೆ ಇಲ್ಲಿ ಸುರಕ್ಷಿತವಾಗಿ ಕ್ಯಾಮರಾ ಇಡಲು ಯಾವುದೇ ವ್ಯವಸ್ಥೆ ಇಲ್ಲ. ಬಾಗಿಲೇ ಇಲ್ಲದ ರೂಂನಲ್ಲಿ ಲಕ್ಷಾಂತರ ಮೌಲ್ಯದ ಕ್ಯಾಮರಾ ಹೇಗೆ ಇಡುವುದು ಎಂದು ಪ್ರವಾಸಿಗನೊಬ್ಬ ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಕ್ಯಾಮರಾ ತೆಗೆದು ಬಿಸಾಡುತ್ತೇನೆ ಎಂಬುದಾಗಿ ದ್ವೀಪದ ನಿರ್ವಹಣಾ ಸಿಬಂದಿ ದರ್ಪದಿಂದ ಉತ್ತರಿಸಿದ್ದಾರೆ. ಪ್ರವಾಸಿಗರನ್ನು ಸಿಬ್ಬಂದಿಯು ಏಕವಚನದಲ್ಲೇ ಮಾತನಾಡಿಸಿದ್ದು, ಬೆದರಿಕೆ ಹಾಕಿದ್ದಾರೆ ಎಂದು ಪ್ರವಾಸಿಗರು ಆರೋಪಿಸಿದ್ದಾರೆ. ಪ್ರವಾಸಿಗ ಹಾಗೂ ಸಿಬ್ಬಂದಿ ನಡುವಿನ ವಾಗ್ವಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!