Sunday, June 7, 2026
Homeಇತರಸ್ನಾನ ಮಾಡುವಾಗ ಬೆತ್ತಲೆ ದೃಶ್ಯ ಸೆರೆ ಹಿಡಿದು ಸರಸಕ್ಕೆ ಬಲವಂತ !

ಸ್ನಾನ ಮಾಡುವಾಗ ಬೆತ್ತಲೆ ದೃಶ್ಯ ಸೆರೆ ಹಿಡಿದು ಸರಸಕ್ಕೆ ಬಲವಂತ !

- Advertisement -
- Advertisement -

ಚೆನ್ನೈ: ಹುಡುಗಿ ಸ್ನಾನ ಮಾಡುವಾಗ ಬೆತ್ತಲೆ ದೃಶ್ಯಗಳನ್ನು ಚಿತ್ರೀಕರಿಸಿಕೊಂಡ ಮೂವರು ಲೈಂಗಿಕ ಬೇಡಿಕೆ ಈಡೇರಿಸುವಂತೆ ಬಲವಂತ ಮಾಡಿದ್ದಾರೆ. ಇದಕ್ಕೆ ಒಪ್ಪದ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

15 ವರ್ಷದ ಬಾಲಕಿ ಮನೆಯಲ್ಲಿ ಸ್ನಾನ ಮಾಡುವ ವೇಳೆ ನೆರೆಹೊರೆಯ ಮೂವರು ಅಪ್ರಾಪ್ತರು ದೃಶ್ಯ ಸೆರೆ ಹಿಡಿದಿದ್ದಾರೆ. ದೈಹಿಕ ಸಂಪರ್ಕಕ್ಕೆ ಬಲವಂತ ಮಾಡಿದ್ದು, ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೆ ಸ್ನಾನದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದರಿಂದ ಮನನೊಂದ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಸುಟ್ಟ ಗಾಯಗಳಾಗಿರುವ ಬಾಲಕಿಯನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು ಆಕೆಯಿಂದ ಹೇಳಿಕೆ ಪಡೆದ ಪೊಲೀಸರು ಬಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!