Saturday, June 6, 2026
Homeಕರಾವಳಿಉಡುಪಿಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಸ್ಕಾರ್ಫಿಯೋ ಕಾರು

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಸ್ಕಾರ್ಫಿಯೋ ಕಾರು

- Advertisement -
- Advertisement -

ಉಡುಪಿ :  ಚಾಲಕನ ನಿಯಂತ್ರಣ ತಪ್ಪಿ ಸ್ಕಾರ್ಫಿಯೋ ಕಾರು ಪಲ್ಟಿಯಾದ ಘಟನೆ  ರಾಷ್ಟ್ರೀಯ ಹೆದ್ದಾರಿ 66 ರ ಪಾವಂಜೆ ಮುಖ್ಯ ಜಂಕ್ಷನ್ ಬಳಿ ನಿನ್ನೆ ಸಂಜೆ ನಡೆದಿದೆ.

ಕೊಲ್ಲೂರು ಯಾತ್ರೆಯನ್ನು ಮುಗಿಸಿಕೊಂಡು ಕೇರಳಕ್ಕೆ ತೆರಳುತ್ತಿದ್ದ ಕಾರು ಪಾವಂಜೆ ಜಂಕ್ಷನ್ ಬಳಿ ಬಂದಾಗ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಹತ್ತಿರದಲ್ಲಿದ್ದ ಎಳನೀರು ಮಾರಾಟದ ಅಂಗಡಿಯತ್ತ ನುಗಿದ್ದು ಅಲ್ಲಿ ನಿಲ್ಲಿಸಿದ್ದ ಬೈಕೊಂದಕ್ಕೆ ಢಿಕ್ಕಿ ಹೊಡೆದಿದೆ.

ರಾಜು ಅವರ ಅಂಗಡಿಯ ಲ್ಲಿ ಮಾರಾಟಕ್ಕಿಟ್ಟಿದ್ದ ಎಳನೀರು, ತೆಂಗಿನ ಮರ, ಸೋಟಾ ಬಾಟ್ಲಿಗಳು ಚೆಲ್ಲಾಪಿಲ್ಲಿಯಾಗಿದೆ. ಬೈಕ್ ಸವಾರ ಪಕ್ಷಿಕೆರೆಯ ಸರ್ಫಾಜ್ ಬೈಕ್ ನಿಲ್ಲಿಸಿ, ಎಳನೀರು ಕುಡಿಯಲೆಂದು ತೆರಳಿದ್ದರು.

ಕೇರಳ ಮೂಲದ ಕಾರಿನಲ್ಲಿ ಮೂವರು ಮಹಿಳೆಯರು, ಮಗು ಹಾಗೂ ಮೂವರು ಪುರುಷರಿದ್ದು ಓರ್ವ ಮಹಿಳೆಗೆ ತಲೆಗೆ ಗಂಭೀರ ಗಾಯವಾಗಿದೆ. ಉಳಿದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!