Saturday, June 13, 2026
Homeಕರಾವಳಿವಿಟ್ಲ: 8ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ವಿಟ್ಲ: 8ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ವಿಟ್ಲ: 8ನೇ ತರಗತಿ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಣಚ ಗ್ರಾಮದಲ್ಲಿ ನಡೆದಿದೆ. ಪುಣಚ ಗ್ರಾಮದ ಮಣಿಲ ರವೀಂದ್ರ ಗೌಡ ಎಂಬವರ ಪುತ್ರ ಹೇಮಂತ್(14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಪುಣಚ ದೇವಿನಗರ ಶ್ರೀ ದೇವಿ ವಿದ್ಯಾಕೇಂದ್ರದ ಪ್ರೌಢಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತ ಮನೆ ಮಂದಿಯೆಲ್ಲಾ ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಯ್ಯಪ್ಪ ವ್ರತಧಾರಿಗಳು ಇರುಮುಡಿ ಕಟ್ಟುವ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಮನೆಯಲ್ಲಿದ್ದ ಹಳೆಯ ಬಟ್ಟೆಯನ್ನು ಕುಣಿಕೆ ರೀತಿ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿದೆ. ಪ್ರತಿಭಾವಂತ ವಿಧ್ಯಾರ್ಥಿಯಾಗಿರುವ ಹೇಮಂತ್, ಪರೀಕ್ಷೆ ಹಿನ್ನಲೆ ಮನೆಯಲ್ಲೇ ಓದುತ್ತಿದ್ದ ಎಂದು ಹೇಳಲಾಗಿದೆ.

- Advertisement -

Latest News

error: Content is protected !!