Saturday, June 6, 2026
Homeಕರಾವಳಿಮಂಗಳೂರು: ರಸ್ತೆ, ಚರಂಡಿ ಅಭಿವೃದ್ಧಿ ಮಾಡುವ ಅರ್ಹತೆ, ಯೋಗ್ಯತೆ ಬಿಜೆಪಿ ಸರ್ಕಾರಕ್ಕಿಲ್ಲ: ಕಟೀಲ್‌ ಹೇಳಿಕೆ ವಿರುದ್ಧ...

ಮಂಗಳೂರು: ರಸ್ತೆ, ಚರಂಡಿ ಅಭಿವೃದ್ಧಿ ಮಾಡುವ ಅರ್ಹತೆ, ಯೋಗ್ಯತೆ ಬಿಜೆಪಿ ಸರ್ಕಾರಕ್ಕಿಲ್ಲ: ಕಟೀಲ್‌ ಹೇಳಿಕೆ ವಿರುದ್ಧ ಯು.ಟಿ.ಖಾದರ್‌ ಕಿಡಿ

- Advertisement -
- Advertisement -

ಮಂಗಳೂರು: ರಸ್ತೆ, ಚರಂಡಿ ಯೋಚನೆ ಬಿಟ್ಟು ನಿಮ್ಮ ಮಕ್ಕಳನ್ನು ಲವ್-ಜಿಹಾದ್ ನಿಂದ ಉಳಿಸುವ ಕಡೆ ಗಮನ ಹರಿಸಿ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆ ವಿರುದ್ಧ ಯು.ಟಿ.ಖಾದರ್‌ ಕಿಡಿಕಾರಿದ್ದಾರೆ.

ಚರಂಡಿ, ರಸ್ತೆ ಮೊದಲಾದ ಅಭಿವೃದ್ಧಿ ಕೆಲಸಗಳ ಯೋಚನೆ ಬೇಡ ಅಂದರೆ ಅವುಗಳನ್ನು ಮಾಡುವ ಅರ್ಹತೆ ಮತ್ತು ಯೋಗ್ಯತೆ ಬಿಜೆಪಿ ಸರ್ಕಾರಕ್ಕಿಲ್ಲ ಅನ್ನೋದನ್ನು ಕಟೀಲ್ ಅವರು ಒಪ್ಪಿಕೊಂಡಂತಾಯಿತು ಎಂದು ಖಾದರ್ ಹೇಳಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕರಾವಳಿ ಭಾಗದ ಜನರಿಗೆ ಪಡಿತರ ಚೀಟಿ ಮತ್ತು ಕುಚಲಕ್ಕಿ ನೀಡುವ ಏರ್ಪಾಟು ಮಾಡಿತ್ತು. ಆದರೆ ಈ ಸರ್ಕಾರಕ್ಕೆ ಜನರಿಗೆ ಕುಚಲಕ್ಕಿ ಒದಗಿಸುವ ಯೋಗ್ಯತೆ ಕೂಡ ಇಲ್ಲ ಎಂದು ಖಾದರ್ ಗೇಲಿ ಮಾಡಿದರು.

- Advertisement -

Latest News

error: Content is protected !!