Saturday, August 29, 2026
Homeಕರಾವಳಿಉಡುಪಿಸುಳ್ಯ: ಚೆಂಬು ಗ್ರಾಮದಲ್ಲಿ ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ:ಲಕ್ಷಾಂತರ ರೂಪಾಯಿ ನಷ್ಟ

ಸುಳ್ಯ: ಚೆಂಬು ಗ್ರಾಮದಲ್ಲಿ ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ:ಲಕ್ಷಾಂತರ ರೂಪಾಯಿ ನಷ್ಟ

- Advertisement -
- Advertisement -

ಮಡಿಕೇರಿ: ರಬ್ಬರ್ ಶೀಟ್ ಒಣಗಿಸುವ ಹೊಗೆ ಮನೆಗೆ ಮನೆಗೆ ಬೆಂಕಿ ತಗುಲಿ ಸುಟ್ಟು ಹೋದ ಘಟನೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ನಡೆದಿದೆ.

ಅಗ್ನಿ ಅನಾಹುತದಲ್ಲಿ ಹೊಗೆ ಮನೆ ಹೊತ್ತಿ ಉರಿದಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ.

ಚೆಂಬು ಗ್ರಾಮದ ಸೂರಜ್ ಹೊಸೂರು ಎಂಬವರಿಗೆ ಸೇರಿದ ಹೊಗೆಮನೆ ನಾಶವಾಗಿದ್ದು, ಸ್ಥಳೀಯರು ಬೆಂಕಿ‌ ನಂದಿಸಲು ಹರ ಸಾಹಸ ಪಟ್ಟಿದ್ದಾರೆ.

ಬೆಂಕಿಯ ತೀವ್ರತೆ ಹೆಚ್ಚಾಗಿದ್ದ ಕಾರಣ ಸುಳ್ಯದ ಅಗ್ನಿ ಶಾಮಕ‌ ದಳಕ್ಕೆ ಮಾಹಿತಿ ನೀಡಲಾಗಿತ್ತು.

- Advertisement -

Latest News

error: Content is protected !!