Saturday, June 6, 2026
Homeತಾಜಾ ಸುದ್ದಿಕೊರೊನಾ ಸಾವಿನಲ್ಲೂ ಗುಜರಾತ್ ದೇಶಕ್ಕೆ ಮಾದರಿ: ರಾಹುಲ್ ಗಾಂಧಿ

ಕೊರೊನಾ ಸಾವಿನಲ್ಲೂ ಗುಜರಾತ್ ದೇಶಕ್ಕೆ ಮಾದರಿ: ರಾಹುಲ್ ಗಾಂಧಿ

- Advertisement -
- Advertisement -

ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿಗಳ ಅಂಕೆ ಸಂಖ್ಯೆ ಮುಂದಿಟ್ಟುಕೊಂಡು ಗುಜರಾತ್‌ನಲ್ಲೇ ಅತಿ ಹೆಚ್ಚು ಮರಣ ಪ್ರಮಾಣವಿದೆ ಎಂಬ ಬಿಬಿಸಿ ವರದಿಯನ್ನು ಆದರಿಸಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ಗುಜರಾತ್‌ನಲ್ಲಿ ಮರಣ ಪ್ರಮಾಣ ಶೇ.6.25ರಷ್ಟಿದೆ ಮಹಾರಾಷ್ಟ್ರದಲ್ಲಿ 3.73 ಇದೆ, ರಾಜಸ್ಥಾನದಲ್ಲಿ ಶೇ.2.32, ಪಂಜಾಬ್ ಶೇ.2.17, ಪುದುಚೆರಿ ಶೇ.1.98, ಜಾರ್ಖಂಡ್ ಶೇ.0.5, ಛತ್ತೀಸ್‌ಗಢ ಶೇ.0.35 ರಷ್ಟಿದೆ.

ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಹಾಗೂ ಬಿಜೆಪಿ ಆಡಳಿತವಿರುವ ಗುಜರಾತ್‌ನ್ನು ಕಾಂಗ್ರೆಸ್ ಆಡಳಿತವಿರುವ ಉಳಿದ ರಾಜ್ಯಗಳೊಂದಿಗೆ ರಾಹುಲ್ ಗಾಂಧಿ ಹೋಲಿಕೆ ಮಾಡಿ ಗುಜರಾತ್ ಮಾದರಿಯನ್ನು ಪ್ರಶ್ನಿಸಿದ್ದಾರೆ.

ಕಳೆದ ಆರೇಳು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮಾದರಿ ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದರೆ, ರಾಹುಲ್ ಗಾಂಧಿ ಅದರ ವಿರುದ್ಧ ಅಭಿಯಾನ ನಡೆಸುತ್ತಲೇ ಇದ್ದಾರೆ, ಅದರ ಮುಂದುವರಿದ ಭಾಗವಾಗಿ ಕೊವಿಡ್ 19 ವಿಚಾರದಲ್ಲಿಯೂ ಹೀಗೆ ನಡೆದುಕೊಂಡಿದ್ದಾರೆ.

- Advertisement -

Latest News

error: Content is protected !!