Saturday, June 6, 2026
Homeಕರಾವಳಿಉಪ್ಪಿನಂಗಡಿ: ಯಾರೂ ಇಲ್ಲದ ವೇಳೆ  ಮನೆಗೆ ನುಗ್ಗಿ ಚಿನ್ನ ನಗದು ದೋಚಿದ ಕಳ್ಳರು

ಉಪ್ಪಿನಂಗಡಿ: ಯಾರೂ ಇಲ್ಲದ ವೇಳೆ  ಮನೆಗೆ ನುಗ್ಗಿ ಚಿನ್ನ ನಗದು ದೋಚಿದ ಕಳ್ಳರು

- Advertisement -
- Advertisement -

ಉಪ್ಪಿನಂಗಡಿ: ಯಾರೂ ಇಲ್ಲದ ವೇಳೆ  ಮನೆಗೆ ನುಗ್ಗಿ ಕಳ್ಳರು  ಚಿನ್ನ ಹಾಗೂ ನಗದು ದೋಚಿದ ಘಟನೆ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುರ ಎಂಬಲ್ಲಿ ಸೋಮವಾರ ಬೆಳಕಿಗೆ ಬಂದಿದೆ.

ಇಲ್ಲಿನ ಮೀನಾಕ್ಷಿ ಎಂಬವರ ಮನೆಗೆ ಹಿಂಬಾಗಿಲಿನ ಮೂಲಕ ಒಳನುಗ್ಗಿರುವ ಕಳ್ಳರು ಮನೆಯ ಕಪಾಟಿನಲ್ಲಿರಿಸಿದ್ದ ಎರಡೂವರೆ ಪವನ್ ಚಿನ್ನದ ಸರ ಹಾಗೂ 32,500 ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಮೀನಾಕ್ಷಿಯವರು ಮಾತ್ರ ಈ ಮನೆಯಲ್ಲಿದ್ದು, ನಿನ್ನೆ ಮಧ್ಯಾಹ್ನ ಗುರುವಾಯನಕೆರೆಯಲ್ಲಿರುವ ತನ್ನ ಮಗಳ ಮನೆಗೆ ತೆರಳಿದ್ದರು. ಸೋಮವಾರ ವಾಪಸ್ ಬಂದ ಇವರು ಮನೆಯ ಮುಂಬಾಗಿಲು ತೆರೆದು ಮನೆಯೊಳಗೆ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ.

ಈ ಬಗ್ಗೆ ಮೀನಾಕ್ಷಿಯವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ

- Advertisement -

Latest News

error: Content is protected !!