Friday, June 5, 2026
Homeಕರಾವಳಿರಿಕ್ಷಾದಲ್ಲಿ ಅಕ್ರಮವಾಗಿ ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರ ಬಂಧನ

ರಿಕ್ಷಾದಲ್ಲಿ ಅಕ್ರಮವಾಗಿ ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರ ಬಂಧನ

- Advertisement -
- Advertisement -

ಬಂಟ್ವಾಳ: ರಿಕ್ಷಾದಲ್ಲಿ ಅಕ್ರಮವಾಗಿ ಎಂ.ಡಿ.ಎಂ.ಎ ಮಾದಕವಸ್ತುವನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಟ್ವಾಳ ನಗರ ಪೋಲೀಸ್ ಠಾಣಾ ಎಸ್‌ಐ.ಅವಿನಾಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ  ಮಾದಕ ವಸ್ತು  ಹಾಗೂ ರಿಕ್ಷಾ ಸಹಿತ ಬಂಧಿಸಿದ ಘಟನೆ ಬಿಸಿರೋಡನಲ್ಲಿ ಡಿ.22 ರಂದು ಗುರುವಾರ ಸಂಜೆ ವೇಳೆ ನಡೆದಿದೆ.

ರಿಕ್ಷಾ ಚಾಲಕ ಬಂಟ್ವಾಳ ಬಾರೆಕಾಡು ನಿವಾಸಿ ಇರ್ಷಾದ್ ಹಾಗೂ ಸವಾರ ಮಂಜೇಶ್ವರ ನಿವಾಸಿ ದಿಕ್ಷಿತ್ ಬಂಧಿತ ಆರೋಪಿಗಳು.ಬಂಧಿತರಿಂದ ರೂ.20 ಸಾವಿರ ಮೌಲ್ಯದ 9 ಗ್ರಾಂ MDMA ಹಾಗೂ ಮಾರಾಟ ಮಾಡಲು ಹೋಗುವ ರೂ.75 ಸಾವಿರ ಮೌಲ್ಯದ ರಿಕ್ಷಾವನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಎಸ್.ಐ.ಅವಿನಾಶ್ ಅವರು ಸಂಜೆ ರೌಂಡ್ಸ್ ನಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಬಿಸಿರೋಡಿನಿಂದ ಗೂಡಿನ ಬಳಿ ಕಡೆಗೆ ಹೋಗುತ್ತಿದ್ದ ರಿಕ್ಷಾವೊಂದನ್ನು ರೈಲ್ವೆ ನಿಲ್ದಾಣ ದ ಎದುರುಗಡೆ ಗಣೇಶ್ ಬೀಡಿ ದಾಸ್ತಾನು ಮಳಿಗೆ ಮುಂಭಾಗದಲ್ಲಿ ತಡೆದು ನಿಲ್ಲಿಸಿ ವಿಚಾರಣೆ ನಡೆಸಿ ದಾಖಲೆ ಪತ್ರಗಳನ್ನು ಕೇಳಿದಾಗ ನೀಡದೆ ತೊದಲುತ್ತಿದ್ದಾರೆ., ಸಂಶಯದಿಂದ ಹೆಚ್ಚಿನ ವಿಚಾರಣೆ ನಡೆಸಿದಾಗ ಅವರು ನಿದ್ರಾಜನಕ ಮಾತ್ರೆಗಳನ್ನು ಸೇವಿಸಿದ ಬಗ್ಗೆ ಹಾಗೂ ಅಕ್ರಮವಾಗಿ ಮಾರಾಟ ‌ಮಾಡುವ ಉದ್ದೇಶದಿಂದ ಅಮಲು ಪದಾರ್ಥಗಳನ್ನು ಇಟ್ಟುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಅವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!