Friday, June 5, 2026
Homeಕರಾವಳಿಮಂಗಳೂರು ಹೊರವಲಯದ ತೊಕ್ಕೊಟ್ಟು ಬಳಿ ಭಿನ್ನ ಕೋಮಿನ ಯುವಕ-ಯುವತಿಗೆ ಭಜರಂಗದಳ ಎಚ್ಚರಿಕೆ

ಮಂಗಳೂರು ಹೊರವಲಯದ ತೊಕ್ಕೊಟ್ಟು ಬಳಿ ಭಿನ್ನ ಕೋಮಿನ ಯುವಕ-ಯುವತಿಗೆ ಭಜರಂಗದಳ ಎಚ್ಚರಿಕೆ

- Advertisement -
- Advertisement -

ಮಂಗಳೂರು: ಭಿನ್ನ ಕೋಮಿನ ಜೋಡಿಗೆ ಭಜರಂಗದಳ ಕಾರ್ಯಕರ್ತರು ಎಚ್ಚರಿಕೆ ನೀಡಿರುವ ಘಟನೆ
ಮಂಗಳೂರು ಹೊರವಲಯದ ತೊಕ್ಕೊಟ್ಟು ಬಳಿ ನಡೆದಿದೆ.

ತೊಕ್ಕೊಟ್ಟು ಸಮೀಪದ ಅಬ್ಬಂಜರ ಬಳಿ ಹಿಂದೂ ಯುವತಿಯ ಜತೆಗಿದ್ದ ಮುಸ್ಲಿಂ ಯುವಕನಿಗೆ ಭಜರಂಗದಳ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಯುವಕ ತೊಕ್ಕೊಟ್ಟುವಿನಲ್ಲಿ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಯುವತಿಯ ಮನೆ ಬಳಿ ಬಂದು ಆಕೆಯ ಬಳಿ ಮಾತನಾಡುತ್ತಿದ್ದನ್ನು
ಕಂಡು ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಯುವತಿ ಕೂಡಾ ಅದೇ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಉಳ್ಳಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಯುವಕನಿಗೆ ಹಿಂದೂ ಸಂಘಟನೆ ತಂಡ ಎಚ್ಚರಿಕೆ ನೀಡಿದೆ. ಉಳ್ಳಾಲ ಪೊಲೀಸರು ಯುವಕ ಮತ್ತು ಯುವತಿ ಇಬ್ಬರನ್ನೂ ವಿಚಾರಣೆ ನಡೆಸಿ ಕಳುಹಿಸಿದ್ದಾರೆ.

- Advertisement -

Latest News

error: Content is protected !!