Thursday, June 4, 2026
Homeಕರಾವಳಿನಟ ಕಿಚ್ಚ ಸುದೀಪ್ ಕಟೀಲು ದೇವಸ್ಥಾನಕ್ಕೆ ಭೇಟಿ

ನಟ ಕಿಚ್ಚ ಸುದೀಪ್ ಕಟೀಲು ದೇವಸ್ಥಾನಕ್ಕೆ ಭೇಟಿ

- Advertisement -
- Advertisement -

ಮಂಗಳೂರು; ನಟ ಸುದೀಪ್ ಹಾಗೂ ಪತ್ನಿ ಪ್ರಿಯಾ  ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಸುದೀಪ್ ಹಾಗೂ ಅವರ ಪತ್ನಿ ಕಟೀಲು ದುರ್ಗಾ ಪರಮೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭ ದೇವಸ್ಥಾನದ ವತಿಯಿಂದ ಸುದೀಪ್‌ಗೆ ಆತ್ಮೀಯವಾಗಿ ಗೌರವಿಸಲಾಯಿತು.ನಂತರ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಟ ಸುದೀಪ್ ‘ದ.ಕ ಜಿಲ್ಲೆಗೆ ಬಂದು ಕನ್ನಡ ಮಾತಾಡೋಕೂ ಕಷ್ಟ ಆಗುತ್ತೆ. ಇಲ್ಲಿ ಕಾಲಿಡುತ್ತಿದ್ದಂತೆ ಪಾಸಿಟಿಟವ್ ಫೀಲ್ ಆಗಿದ್ದು ಈ ಸಿಂಪಲ್ ದೇವಸ್ಥಾನ. ಈ ದೇಗುಲದ ಸಿಂಪ್ಲಿಸಿಟಿ ನನಗೆ ತುಂಬಾ ಇಷ್ಟವಾಯಿತು. ಮತ್ತೆ ಮತ್ತೆ ಕಟೀಲಿಗೆ ಬರ್ಬೇಕು ಅನಿಸಿದೆ. ಖಂಡಿತಾ ಬರುತ್ತೇನೆ ಎಂದರು.

- Advertisement -

Latest News

error: Content is protected !!