Friday, June 5, 2026
Homeತಾಜಾ ಸುದ್ದಿನಾಳೆಯಿಂದ ನಂದಿನಿ ಹಾಲು ಮತ್ತು ಮೊಸರು ಬೆಲೆ 2 ರೂ. ಏರಿಕೆ

ನಾಳೆಯಿಂದ ನಂದಿನಿ ಹಾಲು ಮತ್ತು ಮೊಸರು ಬೆಲೆ 2 ರೂ. ಏರಿಕೆ

- Advertisement -
- Advertisement -

ಬೆಂಗಳೂರು: ನಾಳೆಯಿಂದ ನಂದಿನಿ ಹಾಲು ಮತ್ತು ಮೊಸರು ಬೆಲೆ ಎರಡು ರೂಪಾಯಿ ಹೆಚ್ಚಳವಾಗಲಿದೆ.

ಇಂದು ನಡೆದ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಲೀಟರ್‌ ಗೆ ಎರಡು ರೂಪಾಯಿ ಹೆಚ್ಚಳ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕಳೆದ ವಾರ ಲೀಟರ್ ಗೆ ಮೂರು ರೂಪಾಯಿ ಹೆಚ್ಚಿಸುವ ನಿರ್ಧಾರವನ್ನು ಕೆಎಂಎಫ್ ತೆಗೆದುಕೊಂಡಿತ್ತು. ಆದರೆ ಆಗ ಸಿಎಂ ಬಸವರಾಜ ಬೊಮ್ಮಾಯಿ‌ ಬೆಲೆ‌ ಹೆಚ್ಚಳ ಮಾಡದಂತೆ ಕೆಎಂಎಫ್ ಗೆ ಸೂಚಿಸಿದ್ದರು.

ಕಳೆದ ಸೋಮವಾರ ನಡೆದಿದ್ದ ಸಭೆಯಲ್ಲಿ ರೈತರು ಮತ್ತು ಗ್ರಾಹಕರಿಗೆ ತೊಂದರೆಯಾಗದ ರೀತಿಯಲ್ಲಿ ಸೂತ್ರ ಸಿದ್ಧಪಡಿಸಿ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಕೆಎಂಎಫ್ ಗೆ ಸಿಎಂ ಸೂಚಿಸಿದ್ದರು.

ಅದರಂತೆ ಇಂದು ಆಡಳಿತ ಮಂಡಳಿ ಸಭೆ ನಡೆಸಿರುವ ಕೆಎಂಎಫ್ ನಾಳೆಯಿಂದ ಹಾಲು ಮತ್ತು ಮೊಸರು ಬೆಲೆ‌ ಲೀಟರ್ ಗೆ ಎರಡು ರೂಪಾಯಿ ಹೆಚ್ಚಿಸುವ ತೀರ್ಮಾನ ತೆಗೆದುಕೊಂಡಿದೆ.

- Advertisement -

Latest News

error: Content is protected !!