Friday, June 5, 2026
Homeಕರಾವಳಿಮಂಗಳೂರು; ಕುಸೇಲ್ದರಸೆ ನವೀನ್ ಡಿ.ಪಡೀಲ್ ಗೆ ಗಾಯ

ಮಂಗಳೂರು; ಕುಸೇಲ್ದರಸೆ ನವೀನ್ ಡಿ.ಪಡೀಲ್ ಗೆ ಗಾಯ

- Advertisement -
- Advertisement -

ಮಂಗಳೂರು: ಸಿನಿಮಾ ಶೂಟಿಂಗ್ ವೇಳೆ 
ಖ್ಯಾತ ನಟ ಕುಸೇಲ್ದರಸೆ ನವೀನ್ ಡಿ.ಪಡೀಲ್ ಬಿದ್ದು ಗಾಯ ಮಾಡಿಕೊಂಡ ಘಟನೆ ನಿನ್ನೆ ಸಂಜೆ ಮಡಂತ್ಯಾರಿನಲ್ಲಿ ನಡೆದಿದೆ.

ತೊಡೆಯ ಭಾಗದಲ್ಲಿ ಮೂಳೆ ಮುರಿತಕ್ಕೊಳಗಾದ ಅವರು ನಗರದ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಳು, ಕನ್ನಡ, ಮಲೆಯಾಳ ಭಾಷೆಯಲ್ಲಿ ಬರಲಿರುವ ಸಿನಿಮಾದ ಚಿತ್ರೀಕರಣ ವೇಳೆ ಘಟನೆ ಸಂಭವಿಸಿದೆ. ನವೀನ್ ಡಿ. ಪಡೀಲ್ ಅನೇಕ ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು ಇತ್ತೀಚಿಗೆ ತೆರೆಕಂಡು ದಾಖಲೆ ನಿರ್ಮಿಸಿದ ‘ಕಾಂತಾರ’ ಚಿತ್ರದಲ್ಲೂ ನಟಿಸಿದ್ದಾರೆ. ಮಜಾ ಟಾಕೀಸ್ ಮೂಲಕ ಇಡೀ ರಾಜ್ಯದಲ್ಲಿ ಮನೆ ಮಾತಾಗಿದ್ದಾರೆ.

- Advertisement -

Latest News

error: Content is protected !!