Saturday, June 6, 2026
Homeಕ್ರೀಡೆಕೇರಳದಲ್ಲಿ ಜೋರಾಗಿದೆ ಫಿಫಾ ವಿಶ್ವಕಪ್ 2022 ಹವಾ: ಪಂದ್ಯ‌ ವೀಕ್ಷಿಸಲು 23 ಲಕ್ಷ ರೂ.ಯ ಮನೆ‌...

ಕೇರಳದಲ್ಲಿ ಜೋರಾಗಿದೆ ಫಿಫಾ ವಿಶ್ವಕಪ್ 2022 ಹವಾ: ಪಂದ್ಯ‌ ವೀಕ್ಷಿಸಲು 23 ಲಕ್ಷ ರೂ.ಯ ಮನೆ‌ ಖರೀಸಿದ ಅಭಿಮಾನಿಗಳು

- Advertisement -
- Advertisement -

ಕೇರಳ; ದೇವರನಾಡಿನಲ್ಲಿ ಫಿಫಾ ವಿಶ್ವಕಪ್ 2022 ರ ಹವಾ ಜೋರಾಗಿದೆ. ಪಂದ್ಯ ವೀಕ್ಷಿಸಲು ಅಭಿಮಾನಿಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದು ಕೇರಳದ ಕೊಚ್ಚಿ ಜಿಲ್ಲೆಯ ಮುಂಡಕ್ಕಮುಗಲ್ ಎಂಬ  ಗ್ರಾಮದಲ್ಲಿ ಫುಟ್‌ಬಾಲ್ ಅಭಿಮಾನಿಗಳು 23 ಲಕ್ಷ ರೂಪಾಯಿ ಖರ್ಚು ಮಾಡಿ ಕತಾರ್ ವಿಶ್ವಕಪ್‌ ವೀಕ್ಷಿಸಲು ಮನೆ ಖರೀದಿಸಿದ್ದಾರೆ.

ಗ್ರಾಮದ ಸುಮಾರು 17 ಫುಟ್ಬಾಲ್ ಅಭಿಮಾನಿಗಳು ಜಂಟಿಯಾಗಿ 23 ಲಕ್ಷ ರೂ.ಬೆಲೆಯ ಮನೆ‌ ಖರೀದಿಸಿದ್ದಾರೆ‌.

ಮನೆಯಲ್ಲಿ ಅವರು ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಮತ್ತು ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಪೋಟೋ ಇಟ್ಟಿದ್ದಾರೆ.‌ ಮನೆಯ ಗೋಡೆಗೆ ಬ್ರೆಜಿಲ್, ಅರ್ಜೆಂಟೀನಾ ಮತ್ತು ಪೋರ್ಚುಗಲ್ ಸೇರಿ ವಿವಿಧ ತಂಡದ ಪೋಟೋ ಹಾಕಿಕೊಂಡಿದ್ದಾರೆ.‌ಮನೆಯಲ್ಲಿ ದೊಡ್ಡದಾದ ಟಿವಿ ಅಳವಡಿಸಲಾಗಿದೆ.

FIFA ವಿಶ್ವಕಪ್ 2022 ಪಂದ್ಯದ ವೇಳೆ ನಾವು ವಿಶೇಷ ಪ್ರಯತ್ನ ಮಾಡಿದ್ದೇವೆ. ನಮ್ಮಲ್ಲಿ 17 ಜನರು ಈಗಾಗಲೇ 23 ಲಕ್ಷ‌ ಕೊಟ್ಟು ಮನೆಯನ್ನು ಖರೀದಿಸಿದ್ದೇವೆ. ಅದನ್ನು FIFA ತಂಡಗಳ ಧ್ವಜಗಳಿಂದ ಅಲಂಕರಿಸಿದ್ದೇವೆ. ನಾವು ಇಲ್ಲಿ ಒಟ್ಟಿಗೆ ಸೇರಲು ಮತ್ತು ಪಂದ್ಯವನ್ನು ವೀಕ್ಷಿಸಲು ಉದ್ದೇಶಿಸಿದ್ದೇವೆ.‌ಇದು ಮುಂದಿನ ಪೀಳಿಗೆಗೂ ಸಹಕಾರಿಯಾಗಲಿದೆ ಎಂದು ಶೆಫೀರ್ ಎಂಬವರು ಹೇಳಿದ್ದಾರೆ.

- Advertisement -

Latest News

error: Content is protected !!