Thursday, June 4, 2026
Homeಕರಾವಳಿಸುಳ್ಯದಲ್ಲಿ ಎರಡು ತಿಂಗಳ ಅಂತರದಲ್ಲಿ ಇಬ್ಬರು ಮಹಿಳೆಯರು ನಾಪತ್ತೆ

ಸುಳ್ಯದಲ್ಲಿ ಎರಡು ತಿಂಗಳ ಅಂತರದಲ್ಲಿ ಇಬ್ಬರು ಮಹಿಳೆಯರು ನಾಪತ್ತೆ

- Advertisement -
- Advertisement -

ಸುಳ್ಯ; ಇಲ್ಲಿನ ಸಂಪಾಜೆ ಪರಿಸರದಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ವಿವಾಹಿತ ಮಹಿಳೆಯರು ಕಾಣೆಯಾಗಿದ್ದಾರೆ. ಇಬ್ಬರು ತಮ್ಮ  ಮನೆಯಿಂದ ಕಳೆದ ಎರಡು ತಿಂಗಳಿನಿಂದ ಕಾಣೆಯಾಗಿದ್ದು, ಎಲ್ಲಿಯಾದರೂ ಕಂಡುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸುಳ್ಯ ಪೊಲೀಸ್ ಠಾಣೆಯಿಂದ ಪ್ರಕಟಣೆ ನೀಡಲಾಗಿದೆ.

ಸಂಪಾಜೆ ಗ್ರಾಮದ ಕೀಲಾರುಮೂಲೆ ನಿವಾಸಿ ನಾಗವೇಣಿ (28) ಎಂಬ ಮಹಿಳೆ ಸೆಪ್ಟೆಂಬರ್ 21ರಂದು ಅರಂತೋಡು ಪೋಸ್ಟ್ ಆಫೀಸಿಗೆ ಹೋಗಿ ಬರುವುದಾಗಿ ಮಕ್ಕಳ ಬಳಿ ಹೇಳಿ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿರುತ್ತದೆ. ಸಂಬಂಧಿಕರ ಮನೆಯಲ್ಲಿ ಮತ್ತು ಇತರ ಎಲ್ಲಾ ಕಡೆಯಲ್ಲಿ ಹುಡುಕಾಡಿದರು ಅವರು ಕಾಣದೇ ಇರುವ ಹಿನ್ನೆಲೆಯಲ್ಲಿ ಮಹಿಳೆಯ ಮನೆಯವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈಕೆ ಕಾಣೆಯಾದ ಸಂದರ್ಭ ಚೂಡಿದಾರ  ಧರಿಸಿದ್ದು ತೆಳ್ಳಗೆ ಶರೀರದ ಬಿಳಿ ಮೈಬಣ್ಣದಿಂದ ಕೂಡಿದವರಾಗಿದ್ದಾರೆ. ಕನ್ನಡ ತುಳು ಮಲಯಾಳಂ ಭಾಷೆ ಮಾತನಾಡುತ್ತಾರೆ ಎನ್ನಲಾಗಿದೆ.ಇವರ ಬಗ್ಗೆ ಮಾಹಿತಿ‌ ಸಿಕ್ಕಿದರೆ ಸುಳ್ಯ ಪೊಲೀಸ್ ಠಾಣೆಗೆ ತಿಳಿಸುವಂತೆ ಸುಳ್ಯ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಸಂಪಾಜೆ ಗ್ರಾಮದ ನೆಲ್ಲಿಕುಮೇರಿ ನಿವಾಸಿ  ಮಹಾಲಕ್ಷ್ಮಿ(38) ಎಂಬವರು ಸೆಪ್ಟೆಂಬರ್ 4 ರಂದು ಮನೆಯಿಂದ ರಬ್ಬರ್ ಟ್ಯಾಪಿಂಗ್‌ಗೆ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು ಇವರನ್ನು ತಮಿಳುನಾಡು ಮತ್ತು ಇತರ ಸಂಬಂಧಿಕರ ಕಡೆಗಳಲ್ಲಿ ವಿಚಾರಿಸಲಾಗಿದೆ. ಇದುವರೆಗೆ ಎಲ್ಲಿಯೂ ಕೂಡ ಇವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇವರನ್ನು ಹುಡುಕಿ ಕೊಡುವಂತೆ ಅವರ ಮನೆಯವರು ಸುಳ್ಯ ಠಾಣೆಗೆ ದೂರು ನೀಡಿದ್ದಾರೆ. ಇವರು ಕೂಡ ಕನ್ನಡ ತುಳು ಮಲಯಾಳಂ ತಮಿಳು ಮಾತನಾಡುವವರಾಗಿದ್ದು ಬಿಳಿ ಮೈ ಬಣ್ಣದಿಂದ ಕೂಡಿದವರಾಗಿದ್ದಾರೆ. ಇವರನ್ನು ಕಂಡು ಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!