Tuesday, June 9, 2026
Homeಕರಾವಳಿಉಡುಪಿಉಡುಪಿ; ಜೇನು ನೊಣ ದಾಳಿಗೆ ಮಹಿಳೆ‌‌ ಬಲಿ

ಉಡುಪಿ; ಜೇನು ನೊಣ ದಾಳಿಗೆ ಮಹಿಳೆ‌‌ ಬಲಿ

- Advertisement -
- Advertisement -

ಉಡುಪಿ; ಜೇನು ನೊಣ ದಾಳಿಗಯಿಂದ  ತೀವ್ರವಾಗಿ ಅಸ್ವಸ್ಥಗೊಂಡು ಮಹಿಳೆ ಮೃತಪಟ್ಟ ಘಟನೆ ಉಡುಪಿಯ ಕೆಮ್ಮಣ್ಣು ಎಂಬಲ್ಲಿ  ನಡೆದಿದೆ.
ಕೆಮ್ಮಣ್ಣು ನಿವಾಸಿ ಸಂಪಾ (53) ಮೃತ ದುರ್ದೈವಿ. ಸಂಪಾ ಹಸುಗಳಿಗೆ ಹುಲ್ಲು ತರಲು ಬೆಳಗ್ಗೆ ಕುದ್ರುವಿನಲ್ಲಿರುವ ತೋಟಕ್ಕೆ ಹೋಗಿದ್ದು, ಅಲ್ಲಿ ಇವರ ಮೇಲೆ ಜೇನು ದಾಳಿ ನಡೆಸಿದೆ.‌

ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು ಚಿಕಿತ್ಸೆ ಫಲಿಸದೇ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!