Thursday, June 4, 2026
Homeಕರಾವಳಿಪುತ್ತೂರು; ಪ್ರತಿಷ್ಟಿತ ವಸತಿ ಶಾಲೆಯಿಂದ ವಿದ್ಯಾರ್ಥಿಗಳಿಬ್ಬರು ನಾಪತ್ತೆ

ಪುತ್ತೂರು; ಪ್ರತಿಷ್ಟಿತ ವಸತಿ ಶಾಲೆಯಿಂದ ವಿದ್ಯಾರ್ಥಿಗಳಿಬ್ಬರು ನಾಪತ್ತೆ

- Advertisement -
- Advertisement -

ಪುತ್ತೂರು; ಪ್ರತಿಷ್ಠಿತ ವಸತಿ ಶಾಲೆಯೊಂದರಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.

10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ತಿಪ್ಪೇಶ್ (15)  ಮತ್ತು ಅಭಿಷೇಕ್ (15)  ನ.7ರಂದು ಸಂಜೆಯಿಂದ ನಾಪತ್ತೆಯಾಗಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ. 

ಮೈಸೂರು ಮೂಲದವರಾಗಿದ್ದ ಇಬ್ಬರು ವಿದ್ಯಾರ್ಥಿಗಳೂ ಸಂಜೆ ಹೊತ್ತು ಶಾಲೆಯಲ್ಲಿದ್ದರು. ಆ ಬಳಿಕ ಅವರು ತಮ್ಮ ವಸತಿ ನಿಲಯಕ್ಕೆ ಹೋಗದೆ ಶಾಲೆ ಬಿಡುವ ಸಂದರ್ಭ ಪುತ್ತೂರು ಪೇಟೆಗೆ ಬಂದು ರೈಲು ನಿಲ್ದಾಣಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಶಾಲಾ ಆಡಳಿತ ಮಂಡಳಿಯವರು ಮಕ್ಕಳ ಮನೆಯವರಿಗೆ ಕರೆ ಮಾಡಿ ವಿಚಾರಿಸಿದಾಗ ಮನೆಗೂ ಹೋಗಿಲ್ಲ ಎಂಬ ಮಾಹಿತಿ ಲಭ್ಯವಾಗಿತ್ತು.ಈ ನಿಟ್ಟಿನಲ್ಲಿ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

- Advertisement -

Latest News

error: Content is protected !!