Friday, June 5, 2026
Homeತಾಜಾ ಸುದ್ದಿಒಂದೇ ತಿಂಗಳಿನಲ್ಲಿ ಒಂದೇ ಕಾಲೇಜಿನ ಇಬ್ಬರು ಅತಿಥಿ ಉಪನ್ಯಾಸಕರು ಆತ್ಮಹತ್ಯೆ !

ಒಂದೇ ತಿಂಗಳಿನಲ್ಲಿ ಒಂದೇ ಕಾಲೇಜಿನ ಇಬ್ಬರು ಅತಿಥಿ ಉಪನ್ಯಾಸಕರು ಆತ್ಮಹತ್ಯೆ !

- Advertisement -
- Advertisement -

ಮಂಡ್ಯ: ತಿಂಗಳ ಅಂತರದಲ್ಲಿ, ಒಂದೇ ಕಾಲೇಜಿನ ಇಬ್ಬರು ಅತಿಥಿ ಉಪನ್ಯಾಸಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಲಾಕ್‌ಡೌನ್‌ ಅವಧಿಯ ಮಾನಸಿಕ ಖಿನ್ನತೆಯೇ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮಳವಳ್ಳಿ ಸರ್ಕಾರಿ ಪದವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕಿಯಾಗಿದ್ದ ಕೋಕಿಲಾ (35) ಮೇ 11ರಂದು ನೇಣಿಗೆ ಶರಣಾಗಿದ್ದರೆ, ಇತಿಹಾಸ ಉಪನ್ಯಾಸಕ ಸುರೇಶ್‌ (29) ಜೂನ್‌ 4ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸರ್ಕಾರಿ ಕೆಲಸ ಸಿಕ್ಕಿಲ್ಲ ಜೊತೆಗೆ ಲಾಕ್‌ಡೌನ್‌ನಲ್ಲಿ ಎದುರಾದ ಆರ್ಥಿಕ ಸಂಕಷ್ಟದಿಂದ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಇವರ ಸಾವಿಗೆ ಮೂಲ ಕಾರಣ ತಿಳಿದುಬಂದಿಲ್ಲ.

- Advertisement -

Latest News

error: Content is protected !!