Thursday, July 16, 2026
Homeಕರಾವಳಿಮಂಗಳೂರು: ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ ತೆಂಗಿನಮರ, ಓರ್ವ ಗಂಭೀರ, ಅಪಾರ ಹಾನಿ..

ಮಂಗಳೂರು: ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ ತೆಂಗಿನಮರ, ಓರ್ವ ಗಂಭೀರ, ಅಪಾರ ಹಾನಿ..

- Advertisement -
- Advertisement -

ಮಂಗಳೂರು: ಇಂದು ಮಧ್ಯಾಹ್ನ ಸುರಿದ ಭಾರೀ ಮಳೆಗೆ ಮನೆಯೊಂದರ ಮಾಡಿನ ಮೇಲೆ ತೆಂಗಿನ ಮರ ಉರುಳಿಬಿದ್ದು ಭಾರೀ ಹಾನಿ ಸಂಭವಿಸಿದ ಘಟನೆ ನಗರದ ಹೊರವಲಯದ ಬೆಂಗ್ರೆ ಮೂಳೂರು ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಮನೆಯಲ್ಲಿದ್ದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆನ್ನಲಾಗಿದೆ. ಹೆಂಚಿನ ಮನೆಯ ಮಾಡು ಕುಸಿದು ಲಕ್ಷಾಂತರ ರೂ. ಹಾನಿ ಸಂಭವಿಸಿದ್ದರೆ, ಇಲ್ಲೇ ಪಕ್ಕದ ಮನೆಯ ಕಂಪೌಂಡ್ ಗೋಡೆ ಕುಸಿದು ಹಾನಿ ಸಂಭವಿಸಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

- Advertisement -

Latest News

error: Content is protected !!