Wednesday, June 3, 2026
Homeಕರಾವಳಿಉಡುಪಿಸಿದ್ದರಾಮಯ್ಯ ಕಾಡಿಗೆ ಹೋಗ್ತಾರೆ, ಖರ್ಗೆ ಟಿಕೆಟ್ ನೀಡಲ್ಲ: ಕಲ್ಬುರ್ಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್...

ಸಿದ್ದರಾಮಯ್ಯ ಕಾಡಿಗೆ ಹೋಗ್ತಾರೆ, ಖರ್ಗೆ ಟಿಕೆಟ್ ನೀಡಲ್ಲ: ಕಲ್ಬುರ್ಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಲೇವಡಿ

- Advertisement -
- Advertisement -

ಕಲ್ಬುರ್ಗಿ: ಹಿಂದುಳಿದ ವರ್ಗದ ನಾಯಕ ಅಂತಾ ಹೇಳಿಕೊಂಡ ಸಿದ್ದರಾಮಯ್ಯ ಕಾಡಿಗೆ ಹೋಗುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.‌

ಕಲ್ಬುರ್ಗಿ ನಗರದಲ್ಲಿ ಇಂದು ನಡೆದ ಬಿಜೆಪಿ ಓಬಿಸಿ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ಕಟೀಲ್, ಬಿಜೆಪಿ ಜೊತೆ ಹಿಂದುಳಿದ ವರ್ಗದ ಜನ ಇದ್ದಾರೆ, ಸಿದ್ದರಾಮಯ್ಯ ಮುಂದಿನ ದಿನದಲ್ಲಿ ಶಾಶ್ವತವಾಗಿ ನಿರೋದ್ಯೋಗಿಯಾಗ್ತಾರೆ ಎಂದು ಹೇಳಿದ್ದಾರೆ.

ಅಹಿಂದ ಹೆಸರು ಹೇಳಿ ಸಿಎಂ ಆದ ಸಿದ್ದರಾಮಯ್ಯ, ಸಿಎಂ ಆದ ಮೇಲೆ ಹಿಂದುಳಿದ ವರ್ಗಗಳನ್ನು ತುಳಿದರು ಎಂದು ಆರೋಪಿಸಿದ ನಳೀನ್ ಕುಮಾರ್ ಕಟೀಲ್, ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಏನೂ ಮಾಡಿಲ್ಲ ಎಂದು ಹೇಳಿದ್ದಾರೆ. ‌

ಬಾದಾಮಿ ಜನರು ಬರಬೇಡಿ ಅಂತಾ ಹೇಳುತ್ತಿದ್ದರೆ, ವರುಣಾ ಜನ ಸೋಲಿಸಿದ್ದಾರೆ,
ಹಾಗಾಗಿ ಸಿದ್ದರಾಮಯ್ಯರಿಗೆ ಕ್ಷೇತ್ರವಿಲ್ಲ ಎಂದು ಲೇವಡಿ ಮಾಡಿದ ಕಟೀಲ್‌, ಮುಂದಿನ ದಿನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯಗೆ ಟಿಕೆಟ್ ನೀಡೋದಿಲ್ಲ ಎಂದಿದ್ದಾರೆ.

ಅಲ್ಲದೇ ಮತ್ತೆ ಮಹಾಭಾರತದ ಧರ್ಮಯುದ್ದ ಸಾರುತ್ತೇವೆ ಎಂದು ಹೇಳಿರುವ ನಳೀನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ ಅವರು ಅರ್ಜುನನ ಸ್ಥಾನದಲ್ಲಿ ನಿಂತಿದ್ದಾರೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!