Saturday, June 13, 2026
Homeಕರಾವಳಿಕಾಸರಗೋಡುಕಾಸರಗೋಡು; ಹಾವು ಕಡಿದು ಇಂಜಿನಿಯರ್ ಸಾವು

ಕಾಸರಗೋಡು; ಹಾವು ಕಡಿದು ಇಂಜಿನಿಯರ್ ಸಾವು

- Advertisement -
- Advertisement -

ಕಾಸರಗೋಡು;ಹಾವು ಕಡಿದು ಯುವ ಇಂಜಿನಿಯರ್ ಸಾವನ್ನಪ್ಪಿರುವ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಬದಿಯಡ್ಕ ಪಟ್ಟಾಜೆಯ ಗೋಪಾಲಕೃಷ್ಣ ಭಟ್ ತಿರುಮಲೇಶ್ವರಿ ದಂಪತಿಯ ಪುತ್ರ ಕೃಷ್ಣ ಕುಮಾರ್ (27) ಮೃತ ಯುವಕ.

ಯುವಕನಿಗೆ ಮನೆ ಸಮೀಪ ನಿನ್ನೆ ಸಂಜೆ ಹಾವು ಕಚ್ಚಿದ್ದು, ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಕೃಷ್ಣ ಕುಮಾರ್ ಚೆನ್ನೈನಲ್ಲಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ‌ ಮಾಡುತ್ತಿದ್ದರು.ದೀಪಾವಳಿ ಹಿನ್ನೆಲೆಯಲ್ಲಿ ರಜೆಯಲ್ಲಿ ಊರಿಗೆ ಬಂದಿದ್ದರು.

- Advertisement -

Latest News

error: Content is protected !!