Thursday, June 4, 2026
Homeಕರಾವಳಿಉಡುಪಿಪಡುಬಿದ್ರಿ: ಪೆಟ್ರೋಲ್‌ ಬಂಕ್‌ ಸಿಬ್ಬಂದಿ ನಾಪತ್ತೆ

ಪಡುಬಿದ್ರಿ: ಪೆಟ್ರೋಲ್‌ ಬಂಕ್‌ ಸಿಬ್ಬಂದಿ ನಾಪತ್ತೆ

- Advertisement -
- Advertisement -

ಪಡುಬಿದ್ರಿ: ಪೆಟ್ರೋಲ್‌ ಬಂಕ್‌ನ ಸಿಬ್ಬಂದಿಯೊಬ್ಬರು ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿ ನಾಪತ್ತೆಯಾದ  ಘಟನೆ ಬಡಾ ಎರ್ಮಾಳ್ ಗ್ರಾಮದ ಬುದಗಿ ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ದಿನೇಶ್ ಎಸ್. ನಾಪತ್ತೆಯಾದವರು. ಕಳೆದ ಎರಡು ವರ್ಷಗಳಿಂದ ಇವರು ಬಡಾ ಎರ್ಮಾಳ್ ಗ್ರಾಮದ ಬುದಗಿ ಪೆಟ್ರೋಲ್ ಬಂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ರು. ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ 2000 ರೂ. ಪಡೆದುಕೊಂಡು ಹೋದವರು ವಾಪಾಸ್ಸು ಬಂದಿಲ್ಲ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!