Friday, May 17, 2024
Homeಕರಾವಳಿಬೆಳ್ತಂಗಡಿ : ನೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆಯ ಕ್ರೌರ್ಯ: ಗ್ರಾ.ಪಂ ರಸ್ತೆಯನ್ನು ಬಂದ್ ಮಾಡಿ 2...

ಬೆಳ್ತಂಗಡಿ : ನೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆಯ ಕ್ರೌರ್ಯ: ಗ್ರಾ.ಪಂ ರಸ್ತೆಯನ್ನು ಬಂದ್ ಮಾಡಿ 2 ಮಲೆಕುಡಿಯ ಕುಟುಂಬಕ್ಕೆ ದಿಗ್ಬಂಧನ

spot_img
- Advertisement -
- Advertisement -

ಬೆಳ್ತಂಗಡಿ : ಮಲೆಕುಡಿಯ ಸಮುದಾಯದ ಕುಟುಂಬವೊಂದು ಕಳೆದ 75 ವರ್ಷಗಳಿಂದಲ್ಲೂ ಹೆಚ್ಚು ಕಾಲ ಉಪಯೋಗಿಸುತ್ತಿದ್ದ ಗ್ರಾಮ ಪಂಚಾಯತ್ ರಸ್ತೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರೇ ಅಡಿಕೆ ಗಿಡ ನೆಟ್ಟು ಮಲೆಕುಡಿಯ ಸಮುದಾಯಕ್ಕೆ ದಿಗ್ಬಂಧನ ವಿಧಿಸಿದ ಅಮಾನವೀಯ ಘಟನೆ ನೆರಿಯ ಗ್ರಾಮದಿಂದ ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕಡ್ಡಿಬಾಗಿಲು ಎಂಬಲ್ಲಿಂದ  ಹಾದು ಹೋಗುವ ಗ್ರಾಮ ಪಂಚಾಯತ್ ರಸ್ತೆಯನ್ನು ಮುಚ್ಚಿ ಮಲೆಕುಡಿಯ ಸಮುದಾಯಕ್ಕೆ ಮೂಲಭೂತ ಹಕ್ಕನ್ನು ನಿರಾಕರಣೆ ಮಾಡಿದ ನೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆಯನ್ನು ವಸಂತಿ ಕುಮಾರಿ ಎಂದು ಗುರುತಿಸಲಾಗಿದೆ. ಗ್ರಾಮದ ಸ.ನಂ 186/1 ರಲ್ಲಿ 1 ಎಕರೆ ಜಾಗ ಮಲೆಕುಡಿಯ ಸಮುದಾಯದ ಕಮಲ ಎಂಬವರಿಗೆ 2016 ರಲ್ಲಿ ಮಂಜೂರು ಮಾಡಲಾಗಿದೆ . ಸರಿ ಸುಮಾರು 75 ವರ್ಷಗಳಿಂದಲೂ ಇಲ್ಲಿ ವಾಸ್ತವಿದ್ದು , ರಸ್ತೆ ಸಂಪರ್ಕ ಇತ್ತು. ಆದರೆ ಇದೀಗ ಏಕಾಏಕಿ ರಸ್ತೆ ಮುಚ್ಚುವ ಮೂಲಕ ಎರಡು ಮನೆಗಳ ಸಂಪರ್ಕ ಕಡಿತಗೊಳಿಸಲಾಗಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷೆಯೊರ್ವರು ಗ್ರಾಮ ಪಂಚಾಯತ್ ರಸ್ತೆಯನ್ನೇ ಬಂದ್ ಮಾಡುವ ಮೂಲಕ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ಮಲೆಕುಡಿಯ ಸಮುದಾಯ ಆರೋಪಿಸಿದೆ. ರಸ್ತೆಯ ಉದ್ದಗಲಕ್ಕೂ ಅಡಿಕೆ ಗುಂಡಿ ತೋಡುವ ಮೂಲಕ ಅಮಾನವೀಯತೆ ಮೆರೆಯಲಾಗಿದೆ.  ಈ ಬಗ್ಗೆ ಈಗಾಗಲೇ ಕಮಲ ಅವರ ಮಗ ಹರಿಪ್ರಸಾದ್ ಅವರು ಗ್ರಾಮ ಪಂಚಾಯತ್ , ಜಿಲ್ಲಾಡಳಿತಕ್ಕೂ , ಧರ್ಮಸ್ಥಳ ಪೋಲಿಸ್ ಠಾಣೆಗೂ ದೂರು ನೀಡಿದ್ದಾರೆ. ಆದರೆ ಅಧಿಕಾರಿಗಳು ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆ . ಇದರಿಂದಾಗಿ ಎರಡು ಕುಟುಂಬಗಳು ತೊಂದರೆ ಅನುಭವಿಸುಂತಾಗಿದೆ.

- Advertisement -
spot_img

Latest News

error: Content is protected !!