Wednesday, June 3, 2026
Homeಕರಾವಳಿಬಂಟ್ವಾಳ: ಕೆಎಸ್ ಆರ್ ಟಿಸಿ ಬಸ್ ಹಾಗೂ ಎರಡು ಕಾರುಗಳ ನಡುವೆ ಸರಣಿ ಅಪಘಾತ: ವಿಟ್ಲ...

ಬಂಟ್ವಾಳ: ಕೆಎಸ್ ಆರ್ ಟಿಸಿ ಬಸ್ ಹಾಗೂ ಎರಡು ಕಾರುಗಳ ನಡುವೆ ಸರಣಿ ಅಪಘಾತ: ವಿಟ್ಲ ಮೆಸ್ಕಾಂ ಎಇ ಪ್ರವೀಣ್ ಜೋಶಿ ನಿಧನ

- Advertisement -
- Advertisement -

ಬಂಟ್ವಾಳ : ಕೆಎಸ್ ಆರ್ ಟಿಸಿ ಬಸ್ ಹಾಗೂ ಎರಡು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಹಲವರು ಗಂಭೀರ ಗಾಯಗೊಂಡಿರುವ ಘಟನೆ ಬಂಟ್ವಾಳದ ಮಣಿಹಳ್ಳ ಚಂತಿಮಾರ್ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ. ಈ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿಟ್ಲ ಮೆಸ್ಕಾಂ ಎಇ ಪ್ರವೀಣ್ ಜೋಶಿ ನಿಧನರಾಗಿದ್ದಾರೆ.

ಮಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಮಣಿಹಳ್ಳ ಚಂತಿಮಾರ್ ಬಳಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಸಭಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಗಾಯಗೊಂಡವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ವೇಳೆ ಪ್ರವೀಣ್ ಜೋಶಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ವಗ್ಗದ ತನ್ನ ಮನೆಯಿಂದ ಪ್ರವೀಣ್ ಜೋಷಿ  ತಮ್ಮ ಕಾರಿನಲ್ಲಿ ಕೆಲಸಕ್ಕೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.ಇನ್ನು ಕಾರಿನೊಳಗೆ ಸಿಲುಕಿದ್ದ ಪ್ರವೀಣ್ ಜೋಷಿ ಅವರನ್ನು ಕಾರಿನಿಂದ ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು.

- Advertisement -

Latest News

error: Content is protected !!