- Advertisement -
![]()
- Advertisement -
ಬೆಳ್ತಂಗಡಿ ; ಕರಾವಳಿ ದೈವ ದೇವರುಗಳ ಪವಾಡ ಪದೇ ಪದೇ ನಡೆಯುತ್ತಲೇ ಇರುತ್ತದೆ. ಇದೀಗ ಬೆಳ್ತಂಗಡಿಯ ಆರಿಕೋಡಿಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂತಹದ್ದೇ ಪವಾಡವೊಂದು ನಡೆದಿದೆ. ದೃಷ್ಟಿ ಕಳೆದುಕೊಂಡ ವ್ಯಕ್ತಿಗೆ ದೃಷ್ಟಿ ಮರಳಿ ಬಂದಿದೆ.
ಪುತ್ತೂರು ತಾಲೂಕಿನ ನವೀನ್ ಕೊಯಿಲ ಎಂಬವರು ಚಿಕ್ಕಂದಿನಿಂದಲೇ ದೃಷ್ಟಿ ಸಮಸ್ಯೆಯನ್ನು ಎದುರಿಸುತ್ತಿದ್ದರು. ಸಾಕಷ್ಟು ಪೂಜೆ ಪುನಸ್ಕಾರ, ಔಷಧೋಪಚಾರ ಮಾಡಿದ್ರು ಸಮಸ್ಯೆ ಬಗೆಹರಿದಿರಲಿಲ್ಲ. ಬಳಿಕ ಆರಿಕೋಡಿಯ ಚಾಮುಂಡೇಶ್ವರೀ ದೇವಿ ಸನ್ನಿಧಿಗೆ ಬಂದು ತಮ್ಮ ನೋವನ್ನ ಹೇಳಿಕೊಂಡಿದ್ದರು.ಅದರಂತೆ ಇಲ್ಲಿ ಪ್ರಾರ್ಥನೆ ,ಸಲ್ಲಿಸಿದ ಹಲವು ದಿನಗಳ ಬಳಿಕ ಅವರಿಗೆ ದೃಷ್ಟಿ ಮರಳಿ ಬಂದಿದ್ದು ಈಗ ಎಲ್ಲರಂತೆ ಓಡಾಡುತ್ತಿದ್ದಾರೆ. ಅಲ್ಲದೇ ದೇವಿ ಪವಾಡಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕಡಬ ಮೂಲದ ಯುವಕನೊಬ್ಬನ ಇಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಆರೋಗ್ಯ ಸುಧಾರಿಸಿತ್ತು.
- Advertisement -


